*ಸಿದ್ದಾಪುರ, ಮಾ. 10: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಗೆ ಸೇರಿದ ತ್ಯಾಗತ್ತೂರಿನಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಚೆಸ್ಕಾಂನಿಂದ ಟ್ರಾನ್ಸ್‍ಫಾರ್ಮರ್ ಮಂಜೂರಾದರೂ ಅದನ್ನು ಅಳವಡಿಸದೆ ಮೀನಾಮೇಷ ಎಣಿಸುತ್ತಿದ್ದು, 10 ದಿನದೊಳಗೆ ಅಳವಡಿಸದಿದ್ದಲ್ಲಿ ಕುಶಾಲನಗರ ಚೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಲಾಗುವದೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹಳೆ ಕಾಲದ ಟ್ರಾನ್ಸ್‍ಫಾರ್ಮರ್ ಸುಟ್ಟು ಹೋಗಿದೆ. ಗ್ರಾಮಸ್ಥರಿಗೆ ವೋಲ್ಟೇಜ್ ಸಮಸ್ಯೆಯಿಂದ ಕುಡಿಯಲು ನೀರು ಕಳೆದ 1 ತಿಂಗಳಿನಿಂದ ಲಭಿಸುತ್ತಿಲ್ಲ; ಗ್ರಾಮ ಪಂಚಾಯಿತಿ ಒತ್ತಡದ ಮೇಲೆ ಟ್ರಾನ್ಸ್‍ಫಾರ್ಮರ್ ಮಂಜುರಾಗಿದ್ದರೂ ಇಲಾಖೆ ಅದನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಿದೆÉ.

10 ದಿನದೊಳಗೆ ಅಳವಡಿಸದಿದ್ದಲ್ಲಿ ಚೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವದೆಂದು ಗ್ರಾ.ಪಂ. ಸದಸ್ಯ ಸಲೀಂ, ಗ್ರಾಮಸ್ಥರಾದ ದಿನೇಶ, ಎಂ.ಎಂ. ಶಿವಕುಮಾರ, ಜಯಂತ್, ಮನುಮಹೇಶ್, ಎಂ.ಸಿ. ಬಿದ್ದಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.