ಸುಂಟಿಕೊಪ್ಪ,ಮಾ.11: ಶ್ರೀಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ವಾರ್ಷಿಕ ಪೂಜಾ ಕೈಂಕರ್ಯಗಳಿಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಶ್ರೀಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು ದೇವಸ್ಥಾನ ಜೀರ್ಣೋದ್ಧಾರಗೊಳ್ಳುವವರೆಗೆ ಪೂರ್ಣ ತೆರೆಯನ್ನು ನಿಲ್ಲಿಸಲಾಗಿದ್ದು, ವಾರ್ಷಿಕ ಪೂಜಾ ಕೈಂಕರ್ಯಗಳ ಹಿನ್ನಲೆ ದೇವಾಲಯಗಳನ್ನು ವಿದ್ಯುತ್ ದೀಪ, ಕೆಸರಿ ತಳಿರು ತೋರಣಗಳಿಂದ ದೇವಾಲಯವನ್ನು ಕಂಗೊಳಿಸುತ್ತಿದ್ದು, ಅದರ ಅಂಗವಾಗಿ ತಾ. 11 ರಂದು ಬೆಳಿಗ್ಗೆ 6.ಗಂಟೆಗೆ ಗಣಪತಿ ಹೋಮ, 7.30 ಪೂರ್ಣ ಕುಂಭ ಕಲಶ, ಶುದ್ಧಿಪುಣ್ಯಾಹ 10 ಗಂಟೆಗೆ ಸತ್ಯನಾರಾಯಣ ಪೂಜೆ, ಸಂಜೆ 4.ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ ಕೈಂಕರ್ಯಗಳನ್ನು ದೇವಾಲಯದ ಆರ್ಚಕರುಗಳಾದ ಮಂಜುನಾಥ ಉಡುಪ್ಪ, ಮಂಜುನಾಥ ಭಟ್, ದರ್ಶನ್ ಭಟ್ ಇವರು ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ನೇರವೇರಿಸಿದರು.