ವೀರಾಜಪೇಟೆ, ಮಾ. 11: ಅಮ್ಮ ಭಗವಾನ್ ಅವರ ಜನ್ಮದಿನದಂದು ಅಮ್ಮನವರಿಗೆ ಪ್ರಾರ್ಥನೆಯ ಸೇವೆ ಸ್ಮರಣೆಯಿಂದ ಸುಭಿಕ್ಷಾ ಸಮಾಜದ ನಿರ್ಮಾಣ ಸಾಧ್ಯ ಎಂದು ಕಲ್ಕಿ ಭಗವಾನ್ ಅವರ ಭಕ್ತರು ಅನುಯಾ ಯಿಗಳಾದ ರಾಣಿಜೀ ಹೇಳಿದರು.

ಗೋಣಿಕೊಪ್ಪಲಿನ ಕೈಕೇರಿ ಬಳಿಯ ಅಮ್ಮ ಭಗವಾನ್ ಸೇವಾ ಆಲಯದಲ್ಲಿ ಹಮ್ಮಿಕೊಂಡಿದ್ದ ಅಮ್ಮ ಭಗವಾನ್ ಅವರ 69ನೇ ಜನ್ಮದಿನೋತ್ಸವವನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಅಮ್ಮ ಭಗವಾನ್ ಅವರ ಜನ್ಮ ದಿನೋತ್ಸವ ದಲ್ಲಿ ಗೋಣಿಕೊಪ್ಪ, ಸುತ್ತಮುತ್ತಲಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಇಂದಿರಾಜೀ, ತಾರಾಕಿರಣ್, ತಾರಾ ಟಿಪ್ಪು, ಇನಿತಾಜೀ, ನವೀನ್ ಜೀ ಉಪಸ್ಥಿತರಿದ್ದರು.