ಮಡಿಕೇರಿ, ಮಾ. 11: ಬೆಟ್ಟಗೇರಿ ಗ್ರಾ.ಪಂ.ಗೆ ಒಳಪಟ್ಟ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರಿಂದ ಭೂಮಿಪೂಜೆ ಒಟ್ಟು ರೂ. 16 ಲಕ್ಷ ಮೊತ್ತದಲ್ಲಿ ಕೈಗೊಳ್ಳಲಾಯಿತು.

ಹೆರವನಾಡು- ಉಡೋತ್‍ಮೊಟ್ಟೆ ಹರಿಜನ/ಗಿರಿಜನ ಕಾಲೋನಿಗೆ ರೂ. 5 ಲಕ್ಷ. ಅರ್ವತೊಕ್ಲು ಗ್ರಾಮದ ಜ್ಯೋತಿ ಕಾಲೋನಿ ಹರಿಜನ/ಗಿರಿಜನ ಕಾಲೋನಿಗೆ ರೂ. 5 ಲಕ್ಷದ ರಸ್ತೆಗೆ ಭೂಮಿ ಪೂಜೆ ನೆರವೇರಿಸಲಾಯಿತು. ಅರ್ವತೊಕ್ಲು ಗ್ರಾಮದ ಹೊಳೆಗೆ ರೂ. 6 ಲಕ್ಷದ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ , ಜಿ.ಪಂ. ಅಧ್ಯಕ್ಷ ಹರೀಶ್, ಬಿಜೆಪಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ತಾ.ಪಂ. ಸದಸ್ಯೆ ಕುಮುದಾ ರಶ್ಮಿ, ಕೊಡಪಾಲು ಗಣಪತಿ, ಬೆಪ್ಪುರನ ಮೇದಪ್ಪ, ಶಾಂತಿ ಭಾಗಿಯಾಗಿದ್ದರು.