ಕೂಡಿಗೆ, ಮಾ. 11: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ಶ್ರೀ ಹರಕೆ ಚೌಡೇಶ್ವರಿ ದೇವಿ ಮತ್ತು ನಾಗದೇವರ ವಾರ್ಷಿಕ ಪೂಜೋತ್ಸವ ತಾ. 16 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ರಿಂದ 12.30 ಗಂಟೆಯವರೆಗೆ ಮಹಾ ಗಣಪತಿ ಹೋಮ, ದೇವಿಗೆ ದುರ್ಗಾಹೋಮ, ವಿವಿಧ ಅಭಿಷೇಕಗಳು ನಡೆಯಲಿವೆ. ಸಂಜೆ 7 ಗಂಟೆಗೆ ಕ್ಷೇತ್ರದಲ್ಲಿ ದೀಪಾಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು, ನಂತರ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯುತ್ತದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಸಿ. ರವಿ ತಿಳಿಸಿದ್ದಾರೆ.