ಮಡಿಕೇರಿ, ಮಾ. 11: ಕೊಡಗು ಜಿ¯್ಲÉಯ ತೊರೆನೂರು ಗ್ರಾಮದ ಇತಿಹಾಸ ಪ್ರಸಿದ್ಧ ದಂಡಿನ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸಮಾಜವಾದಿ ಪP್ಷÀದ ಜಿ¯್ಲÁ ಅಧ್ಯP್ಷÀ ಚೀಯಂಡೀರ ಕಿಶನ್ ಉತ್ತಪ್ಪ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಕಿಶನ್, ದೇವಾಲಯ ಶಕ್ತಿ ಕೇಂದ್ರವಿದ್ಧಂತೆ. ಗ್ರಾಮದ ಹಿತಕ್ಕಾಗಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವದಾಗಿ ಹೇಳಿದರು. ದೇವಾಲಯದ ಅರ್ಚಕ ಸಂಜೀವಯ್ಯ ಮಾತನಾಡಿ, ತಲತಲಾಂತರದಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಹಬ್ಬ ಆಚರಿಸಲಾಗುತಿತ್ತು, ಆದರೆ ದೇವಾಲಯ ಶಿಥಿಲಗೊಂಡ ಹಿನ್ನೆಲೆ ಹಬ್ಬ ಆಚರಿಸಲಾಗಿಲ್ಲ. ಈಗ ಕಿಶನ್ ಅವರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಗಣೇಶ್ ಅವರನ್ನು ಪP್ಷÀದ ಅಧ್ಯP್ಷÀರನ್ನಾಗಿ ನೇಮಿಸಲಾಯಿತು. ಉಪಾಧ್ಯP್ಷÀರಾಗಿ ಗಿರೀಶ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹನುಮಯ್ಯ, ಸೋಮಣ್ಣ, ಮೂರ್ತಿ, ಸಂತೋಷï, ದೇವರಾಜು, ಮಂಜುನಾಥ್ ಮಹೇಶ್ ಮೊದಲಾದವರಿದ್ದರು.