ಕುಶಾಲನಗರ, ಮಾ. 11: ಸ್ಪೋಟ್ರ್ಸ್ ಡ್ಯಾನ್ಸ್ ಫೆಡರೇಷನ್ ಅಫ್ ಇಂಡಿಯಾ ವತಿಯಿಂದ ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೋಲೋ ನೃತ್ಯ ಸ್ವರ್ಧೆಯಲ್ಲಿ ಕುಶಾಲನಗರದ ಲಕ್ಷಿತ ಕೆ.ಎನ್. ಪ್ರಥಮ ಸ್ಥಾನಗಳಿಸಿದ್ದಾರೆ. ಮೇ ತಿಂಗಳಲ್ಲಿ ಥೈಲ್ಯಾಂಡ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಲಕ್ಷಿತ ಪಾಲ್ಗೊಳ್ಳಲಿದ್ದಾರೆ.
ಕುಶಾಲನಗರ ಪ.ಪಂ. ಸದಸ್ಯ ಎಂ. ನಂಜುಂಡಸ್ವಾಮಿ, ಜಯಲಕ್ಷ್ಮಿ ದಂಪತಿಯ ಪುತ್ರಿ.