ಕುಶಾಲನಗರ, ಮಾ. 11: ಸಾಮಾಜಿಕ ಹೋರಾಟಗಾರ ಹಾಗೂ ಚಲನಚಿತ್ರ ನಟ ಚೇತನ್ ಬಸವನಹಳ್ಳಿಯಲ್ಲಿನ ಆದಿವಾಸಿಗಳ ಪುನರ್ವಸತಿ ಕೇಂದ್ರಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದರು.

ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆ ಹೋರಾಟ ಸಂದರ್ಭ ಪಾಲ್ಗೊಂಡಿದ್ದ ನಟ ಚೇತನ್, ಬಸವನಹಳ್ಳಿ ಪುನರ್ವಸತಿ ಕೇಂದ್ರದ ಪ್ರಮುಖರು, ಹಾಡಿ ನಿವಾಸಿಗಳೊಂದಿಗೆ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿದರು. ಸುಸಜ್ಜಿತ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಡಬಗ್ಗರ ಸಮಸ್ಯೆಗಳ ಬಗ್ಗೆ ಆಲಿಸುವ ಸರಕಾರ ಮುಂದಿನ ದಿನಗಳಲ್ಲಿ ಬರಬೇಕಿದೆ ಎಂದು ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದರು.