ಭಾಗಮಂಡಲ, ಮಾ. 11: ಭಾಗಮಂಡಲದ ಸ್ಥಳೀಯರಾದ ಕಾಂಗ್ರೆಸ್ ಮುಖಂಡ ವಾಸುದೇವ ನಾಯಕ್ (87) ಅವರು ತಾ. 11 ರಂದು ನಿಧನರಾದರು. ಮೃತರ ಗೌರವಾರ್ಥ ಭಾಗಮಂಡಲದಲ್ಲಿ ಒಂದು ಗಂಟೆಕಾಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಸಂತಾಪ ಸೂಚಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ, ಮೃತರು ದಾನಿಗಳೂ ಆಗಿದ್ದರು. ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.

ವಾಸುದೇವ ನಾಯಕ್ ಅವರ ನಿಧನಕ್ಕೆ ಭಾಗಮಂಡಲ ಕಾಂಗ್ರೆಸ್ ಸಮಿತಿಯಿಂದ ಸಂತಾಪ ಸೂಚಿಸಲಾ ಯಿತು. ಹಿರಿಯ ಮುಖಂಡ ಭಾಗಮಂಡಲ ವಲಯ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ವಾಸುದೇವ ನಾಯಕ್ ಅವರಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ಕುದುಪಜೆ ಪ್ರಕಾಶ್, ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಯೋಜಕ ಕೆದಂಬಾಡಿ ರಮೇಶ್, ರವೀಂದ್ರ ಹೆಬ್ಬಾರ್, ಕೆದಂಬಾಡಿ ಸುರೇಂದ್ರ, ಸುನಿಲ್ ಪತ್ರಾವೊ, ಶಿವಶಂಕರ್, ವೈದ್ಯ ಮತ್ತಿತರರು ಇದ್ದರು.

ಜೆಡಿಎಸ್ ಪ್ರಮುಖ ಹೊಸೂರು ಸತೀಶ್ ಕುಮಾರ್ ವಾಸುದೇವ ನಾಯಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.