ಸಿದ್ದಾಪುರ, ಮಾ. 11: ಇತ್ತೀಚೆಗೆ ತ್ರಿಪುರ ರಾಜ್ಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಸಿಪಿಐ(ಎಂ) ಕಚೇರಿಗೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದಾಪುರ ಹಾಗೂ ನೆಲ್ಯ ಹುದಿಕೇರಿಯಲ್ಲಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡ ಐ.ಆರ್ ದುರ್ಗಾ ಪ್ರಸಾದ್, ಎನ್.ಡಿ ಕುಟ್ಟಪ್ಪ, ಅನಿಲ್ ಕುಟ್ಟಪ್ಪ, ಮಹೇಶ್, ಪಿ.ಆರ್ ಭರತ್, ಮುಸ್ತಫ, ಶಾಲಿ ಫೌಲೋಸ್ ಇನ್ನಿತರರು ಇದ್ದರು.