ಗೋಣಿಕೊಪ್ಪ ವರದಿ, ಮಾ. 11: ಹುಲಿ ದಾಳಿ ನಡೆಸಿ ಗೂಳಿಯನ್ನು ಕೊಂದು ಹಾಕಿರುವ ಘಟನೆ ಶ್ರೀಮಂಗಲ ಸಮೀಪ ಮಾಚಂಗಡ ಕಾಶಿ ಎಂಬವರ ಮನೆಯಲ್ಲಿ ನಡೆದಿದೆ.ಕೊಟ್ಟಿಗೆ ಸಮೀಪ ಕಟ್ಟಿದ್ದ ಗೂಳಿಯನ್ನು ಮುಂಜಾನೆ ಧಾಳಿ ನಡೆಸಿ ಕೊಂದು ಹಾಕಿದೆ. ಶ್ರೀಮಂಗಲ ವಲಯ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೆÉೀಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿ ಗಿರೀಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಈಗಾಗಲೇ ಹಲವು ಗ್ರಾಮಗಳಲ್ಲಿ ಹುಲಿಯ ಧಾಳಿ ಅಧಿಕವಾಗಿದ್ದು ಅರಣ್ಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.