ನಾಪೆÉÇೀಕ್ಲು, ಮಾ. 12: ನಾಪೆÉÇೀಕ್ಲು ವಲಯ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ತಾ. 13 ರಂದು (ಇಂದು) ಸಮೀಪದ ಚೆರಿಯಪರಂಬು ಕೆಡಿಎಂಓ, ಶಾಧಿಮಹಲ್‍ನಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಪಿ.ಎಂ.ರಷೀದ್ ವಹಿಸಲಿರುವರು. ಮುಖ್ಯ ಅಥಿತಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಅಲಿ, ರಾಜ್ಯ ಕಾರ್ಯದರ್ಶಿ ಸತೀಶ್ ಜೋಯಪ್ಪ, ಜೆಡಿಎಸ್ ನಾಯಕರಾದ ಗಣೇಶ್, ಮನೋಜ್ ಬೋಪಯ್ಯ, ಮತೀನ್, ಪಾಣತ್ತಲೆ ವಿಶ್ವನಾಥ್, ರಾಜರಾವ್, ಇಸಾಕ್ ಖಾನ್, ರಾಜೇಶ್ ಯಲ್ಲಪ್ಪ, ವಿಶ್ವ, ಟಿ.ಹೆಚ್.ಅಹಮ್ಮದ್, ಜಾಶೀರ್ ಮೂರ್ನಾಡು, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್, ಮತ್ತಿತರ ನಾಯಕರು ಉಪಸ್ಥಿತರಿರುವರು.