ಒಡೆಯನಪುರ, ಮಾ. 12: ಬಸ್ಸನ್ನು ಹತ್ತುವ ಸಂದರ್ಭ ಆಯತಪ್ಪಿ ಬಿದ್ದು ಬಸ್ಸಿನ ಚಕ್ರಕ್ಕೆ ಸಿಲುಕಿ ವೃದ್ದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅವರೆದಾಳು ಗ್ರಾಮದಲ್ಲಿ ನಡೆದಿದೆ. ಅವರೆದಾಳು ನಿವಾಸಿ ದಿ. ಕಣ್ಣನ್‍ಗೌಂಡರ್ ಅವರ ಪತ್ನಿ ಚಿಣ್ಣಮ್ಮ(65) ಮೃತಪಟ್ಟ ಮಹಿಳೆ. ಚಿಣ್ಣಮ್ಮ ಇಂದು ಬೆಳಗ್ಗೆ ಸರಕಾರದದಿಂದ ಸಿಗುವÀ ವೃದ್ದಾಪ್ಯ ವೇತನವನ್ನು ಪಡೆಯಲು ಕೊಡ್ಲಿಪೇಟೆ ಬ್ಯಾಂಕಿಗೆ ತೆರಳುವ ನಿಟ್ಟಿನಲ್ಲಿ ಅವರೆದಾಳು ಜಂಕ್ಸನ್‍ನಲ್ಲಿ ಖಾಸಗಿ ಬಸ್ಸಿಗೆ ಹತ್ತುವ ಈ ಸಂದರ್ಭ ಚಿಣ್ಣಮ್ಮ ಆಯಾತಪ್ಪಿ ಬಿದ್ದು ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಅವರ ಕಾಲು ಮತ್ತು ಸೊಂಟದ ಭಾಗದ ಮೇಲೆ ಬಸ್ಸಿನ ಚಕ್ರ ಹರಿದಿದೆ.
ಚಿಣ್ಣಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಚಿಣ್ಣಮ್ಮ ಅವರ ಮೊಮ್ಮಗಳು ತ್ರಿವೇಣಿ ಶನಿವಾರಸಂತೆ ಡಿಗ್ರಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದು ಎಂದಿನಂತೆ ಕಾಲೇಜಿಗೆ ಬಂದಿದ್ದಳು. ಆದರೆ ಆಕೆ ಮನೆಯಿಂದ ನೋಟ್ ಪುಸ್ತಕವನ್ನು ತರಲು ಮರೆತಿದ್ದ ಹಿನ್ನಲೆಯಲ್ಲಿ ಮನೆಗೆ ಹೋಗಿ ನೋಟ್ ಪುಸ್ತಕವನ್ನು ತರಲು ಇದೇ ಬಸ್ ಹತ್ತಿದ್ದಳು. ಅವರೆದಾಳು ಗ್ರಾಮದಲ್ಲಿ ಮೊಮ್ಮಗಳು ಬಸ್ಸಿನ ಹಿಂಭಾಗದ ಬಾಗಿಲಿನಲ್ಲಿ ಇಳಿದರೆ, ಅಜ್ಜಿ ಚಿಣ್ಣಮ್ಮ ಕೊಡ್ಲಿಪೇಟೆಗೆ ಹೋಗಲು ಅದೆ ಬಸ್ಸಿನ ಮುಂಭಾಗದ ಬಾಗಿಲಿನ ಮೂಲಕ ಹತ್ತುವ ಸಂದರ್ಭ ಆಯಾತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಚಿಣ್ಣಮ್ಮ ಪುತ್ರಿ ಶಾಂತಿ ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಸ್ಸು ಚಾಲಕನ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸೋಮವಾರಪೇಟೆ ವೃತ್ತ ನಿರೀಕ್ಷ ನಂಜುಂಡೇಗೌಡ, ಶನಿವಾರಸಂತೆ ಎಸ್‍ಐ ಚಲುವರಾಜು ಭೇಟಿ ನೀಡಿದ್ದರು.
- ಸುರೇಶ್, ನರೇಶ್