ಗುಡ್ಡೆಹೊಸೂರು, ಮಾ. 12: ಇಲ್ಲಿನ ಹೆದ್ದಾರಿ ಬಳಿ ಎರಡು ಬೈಕ್‍ಗಳ ನಡುವೆ ಅಪಘಾತ ನಡೆದು ಗಾಯಗೊಂಡ ಎರಡು ಬೈಕ್‍ಗಳ ಸವಾರರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ರಾತ್ರಿ 9 ಗಂಟೆ ಸಮಯದಲ್ಲಿ ನಡೆದಿದೆ. ಎರಡು ವಾಹನಗಳು ಡಿಕ್ಕಿಯಾಗಿ 100 ಅಡಿ ಅಂತರದಲ್ಲಿ ಬಿದ್ದಿದ್ದುದು ಕಂಡು ಬಂತು. ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್‍ವೊಂದರ ಚಾಲಕ ಕೊಡಗರಹಳ್ಳಿ ಮೂಲದ ಧರ್ಮ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.