ಮಡಿಕೇರಿ, ಮಾ. 12: ಗೊಂದಿಬಸವನಹಳ್ಳಿ ನಿವಾಸಿ ನಾಗೇಶ್ ಎಂಬವರ ಪುತ್ರಿ ದಿವ್ಯಾ (18) ಎಂಬಾಕೆ ಅಸಹಜ ರೀತಿ ಸಾವನ್ನಪ್ಪಿರುವ ಬಗ್ಗೆ ಕುಶಾಲನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿಸರ್ಗಧಾಮ ಬಳಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಇಂದು ಎಂದಿನಂತೆ ಕೆಲಸಕ್ಕೆ ಬಂದಿದ್ದು, ಈ ವೇಳೆ ಕುಸಿದು ಬಿದ್ದಳೆನ್ನಲಾಗಿದೆ. ಈಕೆಯ ಬಾಯಿಯಿಂದ ಜೊಲ್ಲು ಸೋರುತ್ತಿದ್ದು, ವಿಷ ಸೇವಿಸಿರುವ ಶಂಕೆಯೊಂದಿಗೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಳೆಂದು ತಿಳಿದು ಬಂದಿದೆ. ಆ ಮೇರೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.