ವೀರಾಜಪೇಟೆ, ಮಾ. 12: ಐಮಂಗಲ ಗ್ರಾಮದ ಬೊಳ್ಳಚಂಡ ಪ್ರಕಾಶ್ ಎಂಬವರಿಗೆ ಸೇರಿದ ರೂ 30,000 ಮೌಲ್ಯದ ಎರಡೂವರೆ ಚೀಲ ಕರಿಮೆಣಸನ್ನು ಯಾರೋ ಕಳವು ಮಾಡಿದ್ದಾರೆ ಎಂದು ಪ್ರಕಾಶ್ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆ ಪ್ರಕರಣ ದಾಖಲಿಸಲಾಗಿದೆ.

ಐಮಂಗಲ ಗ್ರಾಮದ ಪ್ರಕಾಶ್ ಕುಟುಂಬದವರು ಮನೆಗೆ ಬೀಗ ಹಾಕಿ ಊರಿಗೆ ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಪುಕಾರಿನಲ್ಲಿ ತಿಳಿಸಲಾಗಿದೆ.