ಮಡಿಕೇರಿ, ಮಾ. 12: ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ಶ್ರೀ ಬೊಳ್ಳಿ ಬಲ್ಲಯಪ್ಪ ದೇವರ ಉತ್ಸವವು ತಾ.14ರಿಂದ 16ವರೆಗೆ ನಡೆಯಲಿದೆ. 14ರಂದು ಪಟ್ಟಣಿ, ಅಂದಿಬೊಳಕು, ತೂಚಂಬಲಿ, ಕ್ಷೇತ್ರ ಫಲಪೂಜೆ ನಡೆದು ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯಲಿದೆ. 15ರಂದು ಮಹಾಪೂಜೆ, ಎತ್ತು ಪೋರಾಟ, ಬೊಳಕಾಟ್, ಮೆರವಣಿಗೆ ನಡೆಯಲಿದೆ. 16ರಂದು ಪ್ರಾತಃಕಾಲ 5 ಗಂಟೆಗೆ ಇರುಬೆಳಕು, ಭಕ್ತಾದಿಗಳಿಂದ ಪೂಜೆ, ಮಹಾಪೂಜೆ, ತೆಂಗಿನಕಾಯಿಗೆ ಗುಂಡು ಹೊಡೆಯುವದು, ದೇವರ ಅವಭೃತ ಸ್ನಾನ, ಮಹಾಪೂಜೆ ನಡೆಯಲಿದೆ.