ವೀರಾಜಪೇಟೆ, ಮಾ.12: ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಪ್ರಮುಖ ವ್ಯಕ್ತಿಗಳ ಪ್ರತಿಮೆಗಳನ್ನು ಭಗ್ನಗೊಳಿಸುವ ದರೊಂದಿಗೆ ದೇಶದಲ್ಲಿ ಕೋಮುವಾದ ಸೃಷ್ಟಿಸಲು ತೊಡಗಿವೆ ಎಂದು ಆರೋಪಿಸಿ ನಗರದ ಗಡಿಯಾರ ಕಂಬದ ಬಳಿ ವಿವಿದ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ದಲಿತ ಸಂಘರ್ಷ ಸಮಿತಿ, ಸಿ.ಪಿ.ಐ. ಪಕ್ಷ, ವೆಲ್‍ಫೆರ್ ಪಾರ್ಟಿ ಅಫ್ ಇಂಡಿಯಾ, ಹಾಗೂ ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಗಡಿಯಾರ ಕಂಬದ ಬಳಿ ಬಿ.ಜೆ.ಪಿ. ಮತ್ತು ಸಂಘ ಪರಿವಾರ ವಿರುದ್ಧ ಘೋಷಣೆಗಳನ್ನು ಕೊಗಿದರು.

ಪ್ರತಿಭಟನೆ ವೇಳೆ ಸಿ.ಪಿ.ಐ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್ ದಲಿತ ಸಂಘರ್ಷ ಸಮಿತಿಯ ಸಂಚಾಲಕ ವಿ.ಅರ್. ರಜನಿಕಾಂತ್ , ಕಟ್ಟಡ ಕಾರ್ಮಿಕರ ಸಂಘದ ನಗರ ಅಧ್ಯಕ್ಷ ಎಂ.ಕೆ. ಮೋಹನ್, ದಲಿತ ಸಂಘರ್ಷ ಸಮಿತಿಯ ಪೊನ್ನಂಪೇಟೆಯ ಪೊನ್ನು, ಕಿರಣ್, ಗಣೇಶ್, ಲವ ಸುರೇಶ್, ಪವನ್ ಹಾಗೂ ಸಿ.ಪಿ.ಐ ಪಕ್ಷದ ಕಾರ್ಯ ಕರ್ತರು ಡಿ.ಎಸ್.ಎಸ್‍ನ ಕಾರ್ಯ ಕರ್ತರು ಹಾಜರಿದ್ದರು.