ಮಡಿಕೇರಿ, ಮಾ. 12: ರಾಮಾಯಣವನ್ನು ಆಧರಿಸಿ ಮಡಿಕೇರಿ ಆಕಾಶವಾಣಿ ಕೇಂದ್ರದ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ರಚಿಸಿದ ‘ರಸ ರಾಮಾಯಣ’ ಕೃತಿಯ ಬಿಡುಗಡೆ ಸಮಾರಂಭ ಇತ್ತೀಚೆಗೆ ಪುತ್ತೂರು ಸಮೀಪದ ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯಿತು. ಮಠದ ಜಗದ್ಗುರು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಈ ಕೃತಿಯನ್ನು ಬಿಡುಗಡೆಗೊಳಿಸಿದರು. ರಾಮಾಯಣ ಕುರಿತಾದ ಸಾವಿರದ ಒಂದು ಪ್ರಶ್ನೋತ್ತರಗಳು ಈ ಕೃತಿಯಲ್ಲಿ ಅಡಕವಾಗಿವೆ.