ಕುಶಾಲನಗರ, ಮಾ 13: ಗಣಿಗಾರಿಕೆಗೆ ನಿಷೇಧ ಹೇರಿರುವ ಗೊಂದಿಬಸವನಹಳ್ಳಿಯ ಕಲ್ಲು ಕ್ವಾರಿಗಳನ್ನು ಪುನರಾರಂಭಿಸುವ ಮೂಲಕ ಭೋವಿ ಜನಾಂಗದವರ ಜೀವನೋಪಾಯಕ್ಕಾಗಿ ಅನುಕೂಲ ಮಾಡಿಕೊಡಬೇಕಿದೆ ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಸುಜಿತ್ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯ ಸರ್ವೆ ನಂ. 1/1 ರಲ್ಲಿ ಇರುವ 318 ಎಕರೆ ಭೂಪ್ರದೇಶ ಸುಮಾರು 26 ಕಲ್ಲುಕೋರೆಗಳಿಗೆ ಭೇಟಿ ಮಾಡಿದ ಸಮಾಜದ ಮುಖಂಡರು ಕ್ವಾರಿಯನ್ನು ಪುನರ್ ಆರಂಭಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅರುಣ್ ಕುಮಾರ್ ಅವರಲ್ಲಿ ವiನವಿ ಮಾಡಿಕೊಂಡರು.