ಸಿದ್ದಾಪುರ, ಮಾ. 13: ಅಮ್ಮತ್ತಿ ಒಂಟಿಯಂಗಡಿ ಪುಲ್ಕಿಮಾಡ್ ಮಖಾಂ ಉರೂಸ್ ತಾ. 18 ಹಾಗೂ 19 ರಂದು ನಡೆಯಲಿದೆ.
ತಾ. 18 ರಂದು ಬೆಳಿಗ್ಗೆ 11 ಗಂಟೆಗೆ ಒಂಟಿಯಂಗಡಿ ಖತೀಬ್ ಅಬ್ದುಲ್ ಸಮ್ಮದ್ ಸಖಾಫಿ ಬಾವುಟ ಏರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ನೇತೃತ್ವವನ್ನು ಕೊಂಡಂಗೇರಿಯ ಬಹು ಉಮ್ಮರ್ ಸಖಾಫಿ ಮುದರ್ರಿಸ್ ವಹಿಸಲಿದ್ದಾರೆ. ತಾ. 19 ರಂದು ಅಪರಾಹ್ನ 3 ಗಂಟೆಗೆ ಉರೂಸ್ ದಫ್ ಕಾರ್ಯಕ್ರಮ ನಡೆಯಲಿದೆ. ನಂತರ 3 ರಿಂದ 4 ಗಂಟೆಯವರೆಗೆ ಸಮೂಹ ಪ್ರಾರ್ಥನೆ. ಸಂಜೆ 4 ರಿಂದ 5 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ.