*ಗೋಣಿಕೊಪ್ಪಲು, ಮಾ. 13 : ಪಟ್ಟಣದಲ್ಲಿ ನಕಲಿ ನೋಟುಗಳ ದಂಧೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
200, 500 ಹಾಗು 2000 ರೂಪಾಯಿಗಳ ನೂತನ ನೋಟುಗಳನ್ನು ಜೆರಾಕ್ಸ್ ಮಾಡುವ ಮೂಲಕ ನಕಲಿ ನೋಟುಗಳ ವಿತರಣಾ ದಂಧೆ ನಡೆಯುತ್ತಿದೆ. ಅಸಲಿ ನೋಟಿನ ನಡುವೆ ಜೆರಾಕ್ಸ್ ನೋಟೊಂದನ್ನು ಹಾಕಿ ನೀಡುತ್ತಿರುವದು ಅಲ್ಲಲ್ಲಿ ಕಂಡು ಬಂದಿದೆ.
ಸೋಮವಾರ ಸಂಜೆ ಸಮಯ ಆಟೋ ಚಾಲಕರೊಬ್ಬರಿಗೆ 200 ರೂಪಾಯಿ ನೋಟಿನ ಜೆರಾಕ್ಸ್ ಒಂದು ದೊರೆತಿದೆ. 200 ರೂಪಾಯಿಯ ಅಸಲಿ ನೋಟಿನ 6000 ರೂಪಾಯಿಗಳ ನಡುವೆ ನಕಲಿ ಜೆರಾಕ್ಸ್ ನೋಟೊಂದು ಪತ್ತೆಯಾಗಿದೆ. ಪಟ್ಟಣದಲ್ಲಿ ಈ ರೀತಿಯ ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡುತ್ತಿರುವ ತಂಡವೊಂದು ಇರಬಹುದು ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.