ಮಡಿಕೇರಿ, ಮಾ. 13: ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಕ್ರಿಕೆಟ್ ಹಬ್ಬ ಮಡ್ಲಂಡ ಕ್ರಿಕೆಟ್ ಕಪ್ ಏ.22 ರಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಡ್ಲಂಡ ಕ್ರಿಕೆಟ್ ಕಪ್ ಸಮಿತಿ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಮಡ್ಲಂಡ ಕ್ರಿಕೆಟ್ ಕಪ್ನ ಅಧ್ಯಕ್ಷ ಮಡ್ಲಂಡ ಮೋನಿಷ್ ಸುಬ್ಬಯ್ಯ, ಈ ಬಾರಿ 19ನೇ ವರ್ಷದ ಕ್ರಿಕೆಟ್ ಹಬ್ಬವನ್ನು ಮಡ್ಲಂಡ ಕುಟುಂಬ ಆಯೋಜಿಸುತ್ತಿದೆ. ಕಳೆದ 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಡಿಕೇರಿ ನಗರದಲ್ಲಿ ಕ್ರಿಕೆಟ್ ಹಬ್ಬ ಆಯೋಜನೆಗೊಂಡಿದೆ ಎಂದು ತಿಳಿಸಿದ್ದಾರೆ.
ತಾ. 12 ರಿಂದ ಕ್ರಿಕೆಟ್ ಕಪ್ಗೆ ನೋಂದಣಿ ಆರಂಭಗೊಂಡಿದ್ದು, ಏ. 5 ತಂಡಗಳ ನೋಂದಣಿಗೆ ಕೊನೆ ಅವಕಾಶವನ್ನು ಕಲ್ಪಿಸಲಾಗಿದೆ. ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9740045143, 9986288963, 9880778047, 9632606913 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.