*ಗೋಣಿಕೊಪ್ಪಲು, ಮಾ. 13: ಗೋಣಿಕೊಪ್ಪಲು ಗ್ರಾ.ಪಂ. ವ್ಯಾಪ್ತಿಯ 7ನೇ ವಿಭಾಗದ ರಸ್ತೆ ಡಾಂಬರೀಕರಣಕ್ಕೆ ಜಿ.ಪಂ. ಸದಸ್ಯ ಸಿ.ಕೆ ಬೋಪಣ್ಣ ಭೂಮಿ ಪೂಜೆ ನೆರವೇರಿಸಿದರು. ಶಾಸಕರ ವಿಶೇಷ ಅನುದಾನವಾದ 10 ಲಕ್ಷ ವೆಚ್ಚದಲ್ಲಿ 7ನೇ ವಿಭಾಗದ ರಾಣಿ ನಾರಾಯಣ ಮನೆಯ ಮುಂಭಾಗದ ರಸ್ತೆ ಹಾಗೂ ನೀರಿನ ಟ್ಯಾಂಕ್ ಇರುವ ರಸ್ತೆ ಭಾಗಕ್ಕೆ ಡಾಂಬರೀಕರಣ ನಡೆಯಲಿದೆ. ಗ್ರಾ.ಪಂ ಸದಸ್ಯೆ ನೂರೇರ ರತಿ ಅಚ್ಚಪ್ಪ, ಗ್ರಾ.ಪಂ. ಸದಸ್ಯರುಗಳಾದ ರಾಮಕೃಷ್ಣ, ಮಂಜು ರೈ, ಮಾಜಿ ಅಧ್ಯಕ್ಷ ರಾಜೇಶ್ ಕೆ, ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ್, ಬಡಾವಣೆಯ ಅಧ್ಯಕ್ಷ ನಾಚಪ್ಪ, ಶಾಜಿ, ಸುಶೀಲಾ, ಪ್ರಮುಖರಾದ ಮದನ್ ಶೆಟ್ಟಿ, ಪುರುಷೋತ್ತಮ, ರಾಜ, ವಿ.ವಿ.ಟಿ. ದರ್ಶನ್ ಹಾಜರಿದ್ದರು.