ಮಡಿಕೇರಿ: ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಒಕ್ಕೂಟ, ನೇತಾಜಿ ಯುವಕ ಮಂಡಳಿ ತಾಳತ್ತಮನೆ, ನೇತಾಜಿ ಯುವತಿ ಮಂಡಳಿ ತಾಳತ್ತಮನೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕಿ ತೆನ್ನೀರ ಜಾನಕಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯೆ ನಿತ್ಯಾ ಕುಮಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲೆ ತೆಕ್ಕಡೆ ಗುಲಾಬಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕೆಲವು ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆದ್ದಂತಹ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಪದ್ಮ ರವಿ, ಪ್ರಾರ್ಥನೆ ಮಂಜುಳ ಆನಂದ್, ಸ್ವಾಗತವನ್ನು ಅಧ್ಯಕ್ಷೆ ನೇತ್ರಾವತಿ, ವಂದನಾರ್ಪಣೆಯನ್ನು ಕಾರ್ಯದರ್ಶಿ ತುಳಸಿ ಮಣಿ ನೆರವೇರಿಸಿದರು.
‘ದೇಶದಲ್ಲಿ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ’
ನಾಪೆÇೀಕ್ಲು: ಭಾರತ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದ ದೇಶವಾಗಿದ್ದು, ಮಾನಸಿಕ ನೆಮ್ಮದಿ ಹಾಗೂ ಸಂಬಂಧಗಳ ಮಹತ್ವವನ್ನು ಸಾರುವದರ ಮೂಲಕ ಹೆಚ್ಚಿನ ಗೌರವ ಮಹಿಳೆಯರಿಗೆ ಲಭಿಸುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲೆ ಉದಿಯಂಡ ಪದ್ಮಜಾ ಸುಭಾಶ್ ಅಭಿಪ್ರಾಯಪಟ್ಟರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕನ್ನಡ ಜಾನಪದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸ್ವಾವಲಂಬಿ ಬದುಕು ನಡೆಸಿದಾಗ ಆತ್ಮವಿಶ್ವಾಸ, ಧೈರ್ಯ ಬರುತ್ತದೆ. ದೇಶದಲ್ಲಿ ವಿವಿಧ ರಂಗಗಳಲ್ಲಿ ಮಹಿಳೆಯರು ಆತ್ಮವಿಶ್ವಾಸದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೃಷಿಯಿಂದ ಹಿಡಿದು ಅಂತರಿಕ್ಷ ಯಾನ, ಸಾರಿಗೆ, ಶಿಕ್ಷಣ, ವಿಜ್ಞಾನ, ಸೇರಿದಂತೆ ಹತ್ತಾರು ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಸ್ತ್ರೀಯರಿಗೆ ಮಹತ್ವ ನೀಡಿದ ದೇಶದಲ್ಲಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಗೌರವ ಹಕ್ಕುಗಳ ರಕ್ಷಣೆ ಮತ್ತಿತರ ಅಂಶಗಳಿಗೆ ಇನ್ನಷ್ಟು ಆದ್ಯತೆ ದೊರೆಯುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸಿ.ಎಸ್. ಸುರೇಶ್ ಮಾತನಾಡಿ, ಗ್ರಾಮೀಣ ಸಂಸ್ಕøತಿಯ ವಿವಿಧ ಚಟುವಟಿಕೆಗಳನ್ನು ಜಾನಪದ ಪರಿಷತ್ತು ಪೋಷಿಸುವ ಕೆಲಸ ಮಾಡುತ್ತಿದೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವದರೊಂದಿಗೆ ಪರಿಸರದ ಅಂಶಗಳಾದ ನೆಲ, ಜಲ ಮೂಲಗಳನ್ನು ಸಂರಕ್ಷಿಸುವ ಮೂಲಕ ಬದುಕನ್ನು ನಿರ್ವಹಿಸುವಂತಾಗಬೇಕು ಎಂದರು.
ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಬಿ.ಎಂ. ಶಾರದ ಮಾತನಾಡಿ, ಮಹಿಳೆಯರಿಗೆ ರಕ್ಷಣೆ ಹಾಗೂ ಸಮಾನತೆ ನೀಡಿದಲ್ಲಿ ದೇಶ ಮುಂದುವರಿಯಬಲ್ಲದು ಕುಟುಂಬದಲ್ಲಿ ಹೇಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತೇವೋ ಅದೇ ರೀತಿ ಸಮಾಜದಲ್ಲೂ ಸಾಮರಸ್ಯ ಮೂಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ನವ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಮುಖ್ಯವಾಹಿನಿಗೆ ಬರುವಂತಾಗಬೇಕು. ಕುಟುಂಬದ ಪೋಷಣೆಗೆ ತನು, ಮನ, ಧನವನ್ನು ಧಾರೆ ಎರೆದ ಮಹಿಳೆಯರನ್ನು ಗೌರವಿಸಿದಾಗ ಸಮಾಜ ಬೆಳೆಯುತ್ತದೆ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಿವೃತ್ತ ಪ್ರಾಂಶುಪಾಲೆ ಉದಿಯಂಡ ಪದ್ಮಜಾ ಸುಭಾಶ್ ಅವರನ್ನು ಕಾಲೇಜಿನ ಸಿಬ್ಬಂದಿಗಳು ಸನ್ಮಾನಿಸಿದರು.
ಸಂಗೀತ ವಿದುಷಿ ಸರಸ್ವತಿ ಮನೋಹರಿ ಅವರಿಂದ ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಹಾಯಕ ಪ್ರಾಧ್ಯಾಪಕಿ ಶಾಲಿನಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಶ್ಯಾಮಲ ನಿರೂಪಿಸಿದರು. ಪವಿತ್ರ ವಂದಿಸಿದರು.
ಸೋಮವಾರಪೇಟೆ: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಹಿಲ್ಸ್‍ನ ಜೇಸಿರೇಟ್ಸ್ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ (ಸಿಕ್ರಂ) ವತಿಯಿಂದ ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಂತಾರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ಸ್ ಅಧ್ಯಕ್ಷೆ ಮಹೇಶ್ವರಿ ಗಿರೀಶ್ ವಹಿಸಿದ್ದರು. ಮಹಿಳಾ ಸಬಲೀಕರಣ ಮತ್ತು ಫೋಕ್ಸೊ ಕಾಯಿದೆ ಬಗ್ಗೆ ಸಿಕ್ರಂನ ಜಿಲ್ಲಾ ಸಂಯೋಜಕಿ ಶೈಲಾ ವಸಂತ್ ಮಾಹಿತಿ ನೀಡಿದರು. ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳ್ಳುವ ಅವಕಾಶಗಳ ಬಗ್ಗೆ ಜೇಸೀ ತರಬೇತಿ ವಿಭಾಗದ ಉಪಾಧ್ಯಕ್ಷೆ ಉಷಾರಾಣಿ ಗುರುಪ್ರಸಾದ್ ಮಾತನಾಡಿದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಮೇಶ್, ಜೇಸೀ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ರುಬೀನಾ, ಜಿಎನ್‍ಡಿ ಉಪಾಧ್ಯಕ್ಷ ವಸಂತ್, ದೊಡ್ಡಮಳ್ತೆ ಒಕ್ಕೂಟದ ಉಪಾಧ್ಯಕ್ಷ ಪುಟ್ಟಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹಿಳಾ ದಿನಾಚರಣೆ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೊಡ್ಡಮಳ್ತೆ ಬಿ ಒಕ್ಕೂಟದ ಮಹಿಳೆಯರಿಗೆ ವಿವಿಧ ಆಟೋಟ- ಮನೋರಂಜನಾ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾಜದಲ್ಲಿ ಮಹಿಳೆಯರ ಪ್ರಭಾವ ಕಾಣುತ್ತಿದೆ
ಮಡಿಕೇರಿ: ದೇಶದಲ್ಲಿ ಮೀಸಲಾತಿಯಡಿ ಮಹಿಳೆಯು ವಿವಿಧ ಕ್ಷೇತ್ರಗಳಲ್ಲಿ ಅಧಿಕಾರ ಹಿಡಿದಿದ್ದರೂ, ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಮಹಿಳೆಯ ಅಧಿಕಾರದಲ್ಲಿ ಪುರುಷರು ಪ್ರಭಾವ ಬೀರುತ್ತಿದ್ದಾರೆ. ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ಸ್ವಚ್ಛಂದವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ ರೈ ಅಭಿಪ್ರಾಯಿಸಿದರು.
ಮಹದೇವಪೇಟೆ ಮಹಿಳಾ ಸಹಕಾರ ಸಂಘದ ವತಿಯಿಂದ ನಡೆದ, ವಾರ್ಷಿಕೋತ್ಸವ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಸವಿತಾ ರೈ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷೆ ಸವಿತಾ ಎನ್. ಭಟ್, ಬದಲಾದ ಕಾಲಘಟ್ಟದಲ್ಲಿ ಮಹಿಳೆ ಎಂದಿಗೂ ಅಬಲೆಯಲ್ಲ ಎಂಬದನ್ನು ನಿರೂಪಿಸುತ್ತಿದ್ದಾಳೆ ಎಂದು ಹೇಳಿದರು. ಕೊಡಗಿನಲ್ಲಿ ಅನೇಕ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯರೇ ಅಧಿಕಾರದಲ್ಲಿದ್ದಾರೆ ಎಂದರು.
ಮಾಧ್ಯಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಬಿ.ಆರ್. ಸವಿತಾ ರೈ ಅವರನ್ನು ಸನ್ಮಾನಿಸಲಾಯಿತು. ದಿನದ ಅಂಗವಾಗಿ ಅಡುಗೆ ಸ್ಪರ್ಧೆ, ಭಕ್ತಿಗೀತೆ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶೈಲಾ ಮಂಜುನಾಥ್, ವಿವಿಧ ಸ್ಪರ್ಧೆಗಳ ತೀರ್ಪುಗಾರರಾದ ಚಿತ್ರಾ ಆರ್ಯನ್, ಸುಶೀಲಾ ಗಾಂಧಿ, ಕುಸುಮಾ ಮತ್ತು ಅಂಜನಾ ಉಪಸ್ಥಿತರಿದ್ದರು.
‘ಸಹಬಾಳ್ವೆಯಿಂದ ಮನು ಕುಲದಲ್ಲಿ ನೆಮ್ಮದಿ ಸಾಧ್ಯ’
ನಾಪೆÉÇೀಕ್ಲು: ಸಮಾಜದಲ್ಲಿ ಸಹಬಾಳ್ವೆಯಿಂದ ಮನುಕುಲದಲ್ಲಿ ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಅಭಿಪ್ರಾಯಪಟ್ಟರು.
ಬಲ್ಲಮಾವಟಿ ಕಾವೇರಿ ಮಹಿಳಾ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ ಎಂದ ಅವರು ಆತ್ಮ ವಿಶ್ವಾಸದಿಂದ ಮುನ್ನಡೆ ದರೆ ಸ್ವಾವಲಂಬನೆಯ ಬದುಕು ನಡೆಸಲು ಸಾಧ್ಯ ಎಂದರು. ಸಾಮಾಜಿಕ ಪಿಡುಗುಗಳಿಂದ ಲಿಂಗ ತಾರತಮ್ಯ, ಅನಾಚಾರ, ಅತ್ಯಾಚಾರ ಮುಂತಾದ ಶೋಷಣೆಗಳನ್ನು ತಡೆಗಟ್ಟುವಲ್ಲಿ ಮಹಿಳೆಯರು ಶ್ರಮಿಸಬೇಕು. ಧೈರ್ಯದಿಂದ ಒಗ್ಗಟ್ಟಾಗಿ ಎಲ್ಲರೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.