ಸೋಮವಾರಪೇಟೆ, ಮಾ. 13: ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಕಾರ್ಯಕಾರಿಣಿ ಸಭೆ ಸಮಾಜದ ಜಿಲ್ಲಾ ಉಪಾಧ್ಯಕ್ಷ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷರಾಗಿ ಬಿ. ರಾಮು, ಗೌರವಾಧ್ಯಕ್ಷರಾಗಿ ತನಿಯಪ್ಪ, ಉಪಾಧ್ಯಕ್ಷರನ್ನಾಗಿ ಜರ್ಮಿ, ಕಾರ್ಯದರ್ಶಿಯಾಗಿ ಮಹೇಶ್, ಖಜಾಂಚಿಯಾಗಿ ವೆಂಕಪ್ಪ ಅವರುಗಳನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಜನಾರ್ಧನ್, ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಜಗನ್ನಾಥ್, ಹೊಸತೋಟ ವಲಯ ಅಧ್ಯಕ್ಷ ದುಶ್ಯಂತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.