ಸಿದ್ದಾಪುರ, ಮಾ. 13: ಸಿದ್ದಾಪುರದ ಚರ್ಚ್ ಸಭಾಂಗಣದಲ್ಲಿ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ 3ನೇಯ ಆವೃತ್ತಿಯ ಕೊಡಗು ಚಾಂಪಿಯನ್ ಲೀಗ್‍ನ ಅಂತಿಮ ಬಿಡ್ಡಿಂಗ್ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಕ್ರೀಡೆಯ ತವರೂರು ಆಗಿರುವ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಗ್ರಾಮೀಣ ಕ್ರಿಕೆಟ್ ಪಟುಗಳಿದ್ದು ಇವರುಗಳ ಪ್ರತಿಭೆಗಳನ್ನು ಹೊರತರಲು ಕೆ.ಸಿ.ಎಲ್. ವೇದಿಕೆ ಕಲ್ಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ರಾಜ್ಯ ಕಾಂಗ್ರೆಸ್‍ನ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್‍ಹಾಜಿ, ನಗರ ಪತ್ರಕರ್ತ ಸಂಘದ ಅಧ್ಯಕ್ಷ ವಾಸು, ಸಿಟಿ ಬಾಯ್ಸ್ ಸಂಘದ ಅಧ್ಯಕ್ಷ ಸುರೇಶ್ ಬಿಳಿಗಿರಿ, ಡೈಮಾಂಡ್ ರಂಶೀದ್, ಹ್ಯಾರೀಸ್ ಸೌಂಡ್ಸ್ ಮಾಲೀಕ ಶಾಫಿ, ಹಾಗೂ ಸಂಘದ ಪದಾಧಿಕಾರಿಗಳು, ಡೋಮೀನಸ್ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು. ರೆಜಿತ್ ಕುಮಾರ್ ಸ್ವಾಗತಿಸಿ ವಂದಿಸಿದರು. ಎಂ.ಎ. ಅಜೀಜ್ ನಿರೂಪಿಸಿದರು.