ವೀರಾಜಪೇಟೆ, ಮಾ. 13: ಮಲೆ ಮಹದೇಶ್ವರ ಬೆಟ್ಟದ ಈಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ತಾ. 15 ರಿಂದ 20ರ ವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಕೊಳುವಂಡ ಸುಮಂತ್ ಪೊನ್ನಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಮಂತ್ ಪೊನ್ನಣ್ಣ ಅವರು ತಾ. 15 ರಂದು ಅಪರಾಹ್ನ 4 ಗಂಟೆಗೆ ಕುಂದಿರ ಮನೆಯಿಂದ ಭಂಡಾರ ಬರುವದು. ರಾತ್ರಿ 7ಗಂಟೆಗೆ ಕೊಡಿಮರ, 8ಗಂಟೆಗೆ ಮಹಾ ಪೂಜೆ, ತಾ. 16 ರಂದು ರಾತ್ರಿ 8 ಗಂಟೆಗೆ ವಿಶೇಷ ಮಹಾಪೂಜೆ, ತಾ. 17ರಂದು ಸಂಜೆ ಇರುಳು ಬೆಳಕು, ಸಾಂಪ್ರದಾಯಿಕ ಪೂಜೆ ತಾ. 18 ರಂದು ಅಪರಾಹ್ನ 12 ಗಂಟೆಗೆ ನೆರಪು, ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವದು ನಂತರ ಸಂಜೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ. ತಾ. 19 ರಂದು ಅಪರಾಹ್ನ 12 ಗಂಟೆಗೆ ಮಹಾಪೂಜಾ ಸೇವೆ, ದೇವರ ಅಭ್ಯಂಜನ ಸ್ನಾನ ತಾ:20ರಂದು ಶುದ್ಧ ಕಳಶ, ಪೂಜೆ ಜರುಗಲಿದೆ ಎಂದರು.
ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್ ಮಾತನಾಡಿ, ಉತ್ಸವದ ಎಲ್ಲ ದಿನಗಳಲ್ಲೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ವೀರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಬರುವ ಭಕ್ತಾದಿಗಳಿಗಾಗಿ ತಾ. 18 ಮತ್ತು 19 ರಂದು ಕೊಡಗು ದಂತ ಮಹಾವಿದ್ಯಾಲಯ ಸಂಸ್ಥೆಯ ಸಹಾಯಾರ್ಥ ಬಸ್ಸು ಸೌಕರ್ಯವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯದ ಅಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ವಾಟೇರಿರ ಪೂವಯ್ಯ, ಸಹ ಕಾರ್ಯದರ್ಶಿ ಚೋಕಂಡ ರಮೇಶ್, ಸಮಿತಿ ಸದಸ್ಯರುಗಳಾದ ಕುಂಡ್ರಂಡ ಬೋಪಣ್ಣ, ಮಾಳೇಟಿರ ನಂಜಪ್ಪ ಹಾಗೂ ಚಾರಿಮಂಡ ಗಣಪತಿ ಹಾಜರಿದ್ದರು.