ಶ್ರೀಮಂಗಲ, ಮಾ. 13: ಪೊರಾಡು ದವಸ ಭಂಡಾರದ ಹೊಸ ಸದಸ್ಯರಿಗೆ ಮರಣ ನಿಧಿ ಸದಸ್ಯತ್ವ ಪಡೆಯಲು 35 ವಯಸ್ಸು ನಿಗದಿಪಡಿಸಲಾಗಿದ್ದು, ಈ ವಯಸ್ಸಿಗೆ ಮೇಲ್ಪಟ್ಟವರಿಗೆ ಮರಣ ನಿಧಿ ಸದಸ್ಯತ್ವ ನೀಡುವದಿಲ್ಲ. ಆದರೆ, ಸದಸ್ಯತ್ವಕ್ಕೆ ಯಾವದೇ ವಯೋಮಾನ ನಿಗದಿ ಪಡಿಸದಿರಲು ತೀರ್ಮಾನ ಕೈಗೊಳ್ಳಲಾಯಿತು.
ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದ ಪೊರಾಡು ದÀವಸ ಭಂಡಾರದ ಅಧ್ಯಕ್ಷ ಮಿದೇರಿರ ಬಿ.ವಿಜಯ ಅವರ ಅಧ್ಯಕ್ಷತೆಯಲ್ಲಿ ನಡೆದ 62ನೇ ವಾರ್ಷಿಕ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮರಣ ನಿಧಿ ಪಾವತಿಸಿದ ಸದಸ್ಯರಿಗೆ ರೂ. 15 ಸಾವಿರ ಮರಣ ನಿಧಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ದವಸ ಭಂಡಾರದಲ್ಲಿ ಈ ಹಿಂದೆ ಭತ್ತವನ್ನು ಸದಸ್ಯತ್ವ ಹಾಗೂ ಮರಣ ನಿಧಿಗೆ ಕೊಟ್ಟು ಪಡೆಯಲಾಗುತ್ತಿತ್ತು. ದವಸ ಭಂಡಾರದಿಂದ ಸದಸ್ಯರಿಗೆ ಸಾಲ ರೂಪದಲ್ಲಿ ಭತ್ತವನ್ನು ನಿಗದಿತ ಬಡ್ಡಿಯೊಂದಿಗೆ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಿಂದ ಭತ್ತದ ಗದ್ದೆ ವ್ಯವಸಾಯ ಮಾಡುವದು ತೀವ್ರವಾಗಿ ಕುಸಿದಿದ್ದು ನಗದು ರೂಪಕ್ಕೆ ಸದಸ್ಯತ್ವ, ಮರಣ ನಿಧಿ ಹಾಗೆಯೇ ಸದಸ್ಯರಿಗೆ ಸಾಲ ನೀಡುವ ಎಲ್ಲಾ ವ್ಯವಹಾರವನ್ನು ಪರಿವರ್ತಿಸಲಾಗಿದೆ ಎಂದು ಅಧ್ಯಕ್ಷ ವಿಜಯ ಹೇಳಿದರು. ಸಂಘದ ಗೌರವ ಕಾರ್ಯದರ್ಶಿ ಬಲ್ಯಮಿದೇರಿರ ಮೋಹನ್ ಕುಮಾರ್ ವಾರ್ಷಿಕ ಜಮಾ ಖರ್ಚಿನ ವರದಿ ಮಂಡಿಸಿದರು. ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಅಣ್ಣೀರ ಕೆ. ಪೊನ್ನಪ್ಪ, ಅಣ್ಣೀರ ಎಸ್. ಮಹೇಂದ್ರ, ಮಲ್ಲೇಂಗಡ ಎ. ಸುಬ್ರಮಣಿ ಹಾಜರಿದ್ದರು.