ಮಡಿಕೇರಿ, ಮಾ. 13: ಕಳೆದ ತಾ. 11.9.2016ರಂದು ಕಗ್ಗೋಡ್ಲುವಿನಲ್ಲಿ ದನಗಳ್ಳರ ಮೇಲೆ ಗುಂಡಿನ ಧಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 7 ಮಂದಿ ಮೇಲೆ 307 ಕೊಲೆಯತ್ನ - ಹಲ್ಲೆ ಸೇರಿದಂತೆ ವಿವಿದ ಐ.ಪಿ.ಸಿ. ಸೆಕ್ಷನ್‍ಗಳ ಅನುಸಾರ ಕೇಸ್ ದಾಖಲಾಗಿತ್ತು. ತೀವ್ರ ಕುತೂಹಲ ಮೂಡಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಮಡಿಕೇರಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಪ್ರಕಟಿಸಿದ್ದಾರೆ. ವಾದ - ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದಲ್ಲಿನ ಎಲ್ಲಾ 7 ಮಂದಿ ಆರೋಪಿತರನ್ನು ನಿರ್ದೋಷಿಗಳೆಂದು ಘೋಷಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿತರ ಪರ ವಕೀಲ ಕೃಷ್ಣಮೂರ್ತಿ ವಾದ ಮಂಡಿಸಿದ್ದರು.