ಹಾನಗಲ್ಲು ಬಾಣೆಯಲ್ಲಿ ಶ್ರಮದಾನ

ಸೋಮವಾರಪೇಟೆ, ಮಾ. 13: ಸಮೀಪದ ಹಾನಗಲ್ಲು ಬಾಣೆ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿ, ಬೇಲಿಗಳನ್ನು ಗ್ರಾಮದ ಯುವಕರು ಶ್ರಮದಾನದ ಮೂಲಕ ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿದರು.

ಗ್ರಾಮದ ಶ್ರೀ ಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ಪದಾಧಿಕಾರಿಗಳಾದ ರಂಜಿತ್, ಹರ್ಷಿತ್, ಮಣಿಕಂಠ, ಪ್ರಮೋದ್, ಉಣ್ಣಿಕೃಷ್ಣ, ರಮೇಶ್, ಸಂತೋಷ್, ಶಶಿಧರ ಸೇರಿದಂತೆ ಇತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.