ಸಿದ್ದಾಪುರ, ಮಾ. 20: ಮೇಯಲು ಹೋದ ಜಾನುವಾರುಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಸಿದ್ದಾಪುರ ಸಮೀಪದ ಘಟ್ಟದಳ್ಳದಲ್ಲಿ ನಡೆದಿದೆ. ಘಟ್ಟದಳ್ಳ ನಿವಾಸಿ, ಕೆ.ಎಂ. ಅಪ್ಪಚ್ಚು ಎಂಬವರಿಗೆ ಸೇರಿದ 4 ಕೋಣಗಳು, 1 ಹಸುಗಳನ್ನು ಕಳೆದೆರೆಡು ದಿನಗಳ ಹಿಂದೆ ಮೇಯಲು ಬಿಡಲಾಗಿತ್ತು. ಆದರೆ 2 ದಿನಗಳು ಕಳೆದರೂ ಜಾನುವಾರುಗಳು ಪತ್ತೆ ಆಗಲಿಲ್ಲ.ಈ ಹಿನ್ನೆಲೆಯಲ್ಲಿ ಅಪ್ಪಚ್ಚು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದು, 5 ಜಾನುವಾರುಗಳು ಕಾಣೆಯಾಗಿರುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.