ಮಡಿಕೇರಿ, ಮಾ. 21: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಉಸ್ತುವಾರಿಯಲ್ಲಿರುವ ಶ್ರೀ ಆಂಜನೇಯ ದೇವಾಲಯದಲ್ಲಿ ತಾ. 25ರಂದು ಬೆಳಿಗ್ಗೆ 7.30 ಗಂಟೆಯಿಂದ ಶ್ರೀ ರಾಮನವಮಿ ಪ್ರಯುಕ್ತ ಶ್ರೀ ರಾಮತಾರಕ ಹೋಮವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 11.30 ಗಂಟೆಗೆ ಮಹಾಮಂಗಳಾರತಿ, ಪಾನಕ, ಕೋಸಂಬರಿ, ಪ್ರಸಾದ ವಿತರಣೆ ನಡೆಯಲಿದೆ.ತಾ. 31ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀ ಹನುಮಜಯಂತಿ ಪ್ರಯುಕ್ತ ವಾಯುಸ್ತುತಿ ಪೂರ್ವಕವಾಗಿ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 7.30 ಗಂಟೆಯಿಂದ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.