ಕುಶಾಲನಗರ, ಮಾ 21: ಇತಿಹಾಸ, ಸಾಹಿತ್ಯ ಮತ್ತು ಸಂಸ್ಕøತಿಯ ಪರಂಪರೆಯ ವೈವಿಧ್ಯದ ನೆಲೆ ಯಾಗಿರುವ ಕೊಡಗು ಜಿಲ್ಲೆ ಸಿಂಧೂ ಸಂಸ್ಕøತಿಯ ಪ್ರತೀಕವಾಗಿದೆ ಎಂದು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷ ಡಾ.ಎಂ.ಜಿ. ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.ಚಿಕ್ಕ ಅಳುವಾರದಲ್ಲಿನ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಂಯುಕ್ತಾಶ್ರಯದಲ್ಲಿ ನಡೆದ ಮಂಗಳ ಪ್ರಚಾರೋಪನ್ಯಾಸ ಮಾಲಿಕೆಯ ಕೊಡಗಿನ ಸಾಹಿತ್ಯ, ಸಂಸ್ಕøತಿ ಮತ್ತು ವರ್ತಮಾನ' ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು,ಕೊಡಗಿನ ಜೀವನದಿ ಕಾವೇರಿ ಪ್ರಾಚೀನತೆಯ ಬೆಡಗು ಎಂದು ಬಣ್ಣಿಸಿದ ಸುಸಂಸ್ಕøತ ಜೀವನಕ್ಕೆ ಅವಕಾಶ ಕೊಟ್ಟ ಕೊಡಗು ಜಿಲ್ಲೆ ವಿಶ್ವಕ್ಕೆ ಮಾದರಿಯಾಗಿದೆ. ವೈಜ್ಞಾನಿಕವಾಗಿ ಅರಣ್ಯದ ರಕ್ಷಣೆ ಮಾಡಿಕೊಂಡು ಬರಲಾಗಿದೆ. ಕೊಡಗು ಹಳೆ ಶಿಲಾಯುಗ, ನವಶಿಲಾಯುಗ, ಬೃಹತ್‍ಶಿಲಾಯುಗಗಳ ಬದುಕನ್ನು ಛಾವಣಿಸಿದ ಬೀಡು ಎಂದು ಶ್ಲಾಘಿಸಿದರು.

ಮಂಗಳೂರು ವಿಶ್ವವಿದ್ಯಾನಿಲ ಯದ ಪ್ರಸಾರಾಂಗದ ನಿರ್ದೇಶಕ ಪ್ರೊ.ಬಿ.ಇಸ್ಮಾಯಿಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಜವಾಬ್ದಾರಿಯ ಜ್ಞಾನದ ಪ್ರಸಾರ ಮಾಡುವ ಉದ್ದೇಶವನ್ನು ಪ್ರಸಾರಾಂಗ ವಿಭಾಗವು ಹೊಂದಿದ್ದು, ಇದುವರೆಗೆ 175 ಕ್ಕೂ ಅಧಿಕ ಪ್ರಚಾರೋಪನ್ಯಾಸ ಮಾಲಿಕೆಗಳನ್ನು ಹೊರತಂದಿದೆ. ಕನ್ನಡ ಪಠ್ಯ ಪುಸ್ತಕಗಳ ಪ್ರಕಟ, ಕಮ್ಮಟ, ಸಮ್ಮೇಳನ ಹಾಗೂ ವಿವಿಧ ಪೀಠಗಳಲ್ಲಿನ ವಿಶೇಷ ಉಪನ್ಯಾಸಗಳನ್ನು ಪ್ರಕಟ ಮಾಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಪಿ.ಎಲ್. ಧರ್ಮ ಮಾತನಾಡಿ, ದೇಶದ ಸಂಸ್ಕøತಿಯ ಉಳಿವಿನಲ್ಲಿ ಸ್ಥಳೀಯ ಸಂಸ್ಕøತಿಯ ತಿಳುವಳಿಕೆ ಅತಿ ಮುಖ್ಯವಾಗಿದೆ ಎಂದರು. ವಿದ್ಯಾರ್ಥಿ ಸಮುದಾಯಕ್ಕೆ ಯಾವದೇ ವಿಷಯದ ಕುರಿತು ತಿಳಿದುಕೊಳ್ಳಬೇಕೆಂಬ ಕುತೂಹಲ ಮತ್ತು ಕಲಿಕೆಯ ಹಂಬಲ ಇರಬೇಕು ಎಂದರು. ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು ಗಳಾದ ನಟರಾಜ್, ಲೋಕೇಶ್ ಭರಣಿ, ಕೆ.ಜೆ.ರಾಬಿನ್, ಹರಿಣಾಕ್ಷಿ, ವಿವಿಧ ವಿಭಾಗದ ಉಪನ್ಯಾಸಕರ ವೃಂದ, ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.