ನಾಪೋಕ್ಲು, ಮಾ. 21: ಪೆರಾಜೆ ಶ್ರೀಶಾಸ್ತಾವು ದೇವಳದ ಕಾಲಾವಧಿ ಜಾತ್ರೋತ್ಸವ ತಾ. 25 ರಿಂದ ಏ. 10ರ ತನಕ ನಡೆಯಲಿದೆ. ಏ. 1 ರಂದು ಐಸಿಹಾಸಿಕ ಪ್ರಸಿದ್ಧ ಭಗವತಿ ದೊಡ್ಡಮುಡಿ, ಏ. 5 ಮತ್ತು 6 ರಂದು ಕಾರಣಿಕೆಗೆ ಹೆಸರುವಾಸಿಯಾದ ಕರಿಭೂತ ದೈವ ಕೋಲ ನಡೆಯಲಿದೆ. ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಒಂದು ತಿಂಗಳುಗಳ ಕಾಲ ನಡೆಯುವ ಜಾತ್ರೆಗೆ ತಾ. 9 ರಂದು ಜಾತ್ರೋತ್ಸವದ ಗೊನೆಮೂಹೂರ್ತ ನಡೆದಿದೆ. ತಾ. 25 ರಂದು ಉಗ್ರಾಣ ತುಂಬಿಸುವದು, ತಾ. 26 ರಂದು ಬೆಳಿಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಸಾಯಂಕಾಲ ಶ್ರೀ ಉಳ್ಳಾಕುಲ ಮಾಡದ ಅರಮನೆಯಿಂದ ಭಂಡಾರ ತರುವದು, ಮುಖತೋರಣ ಏರಿಸುವದು, ಶಿಸ್ತು ಅಳೆಯುವದು, ದೇವರ ನೃತ್ಯಬಲಿ, ರಾತ್ರಿ ಶ್ರೀದೇವರ ಭೂತಬಲಿ ನಡೆಯಲಿದೆ.
ತಾ. 27 ರಂದು ಬೆಳಿಗ್ಗೆ ದೇವರ ದರ್ಶನಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ತುಳುಕೋಲದ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು 2 ನಡೆಯಲಿದೆ. ತಾ. 28 ರಂದು ಮಧ್ಯಾಹ್ನದಿಂದ ಬೇಟೆ ಕರಿಮಗನ್ ಈಶ್ವರನ್ ದೈವ, ಬೇಟೆಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ತುಳು ಕೋಲ 2ರ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ.
ತಾ. 29 ರಂದು ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ಪಳ್ಳಿಯಾರ ಬಾಗಿಲು ತೆರೆಯುವದು ಮತ್ತು ಕರಿಂತಿರಿ ನಾಯರ್, ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು 2 ನಡೆಯಲಿದೆ. ತಾ. 30 ರಂದು ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರ ದೈವ, ರಾತ್ರಿ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು 2 ನಡೆಯಲಿದೆ. ತಾ. 31 ರಂದು ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ ಪುಲ್ಲೂರ್ ಕಣ್ಣನ್ ಬೆಳ್ಳಾಟ1, ತುಳು ಕೋಲಗಳು ಬೆಳ್ಳಾಟ 1, ಮಲೆಕಾರಿ ಬೆಳ್ಳಾಟ 1, ವಿಷ್ಣುಮೂರ್ತಿ, ರಕ್ತೇಶ್ವರಿ, ಪೊಟ್ಟನ್ ದೈವಗಳ ತೊಡಙಲು, ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ, ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಲಿದೆ.
ಶ್ರೀಭಗವತಿ ದೊಡ್ಡಮುಡಿ: ಏ. 1 ರಂದು ಬೆಳಿಗ್ಗೆ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರುಕಣ್ಣನ್, ವಿಷ್ಣುಮೂರ್ತಿ ಮತ್ತು ಬೇಟೆಕರಿಮಗನ್ ಈಶ್ವರನ್ ದೈವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4ಕ್ಕೆ ಶ್ರೀಭಗವತಿ ದೊಡ್ಡಮುಡಿ, ರಾತ್ರಿ ಪಯ್ಯೋಳಿ ನಡೆಯಲಿದೆ. ಏ. 2 ರಂದು ರಾತ್ರಿ ವಾಲಸಿರಿ, ಏ. 3 ರಂದು ಮಹಾಪೂಜೆಯ ನಂತರ ಸಮಾರಾಧನೆ ನಡೆಯಲಿದೆ. ಸಂಜೆ ಕಿರಿಯರ ನೇಮ ಮತ್ತು ರುದ್ರ ಚಾಮುಂಡಿ ಆಗಿ ಭಂಡಾರ ದೇವಳಕ್ಕೆ ಬಂದು ಕಟ್ಟಾಜ್ಞೆಯಿಂದ ಭಂಡಾರವನ್ನು ಸ್ವಸ್ಥಾನದಲ್ಲಿರಿಸುವದು. ಏ. 4 ರಂದು ಶ್ರೀಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಶ್ರೀ ಕೊರಗ ತನಿಯ ದೈವಗಳ ಕೋಲಗಳು ನಡೆಯಲಿದೆ.
ಏ. 5 ರಂದು ಸಾಮೂಹಿಕ ಶ್ರೀಸತ್ಯನಾರಾಯಣ ದೇವರ ಪೂಜೆ, ರಾತ್ರಿ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು ನಡೆಯಲಿದೆ. ಏ. 6 ರಂದು ಶ್ರೀ ಕರಿಭೂತ ಕೋಮಾಳಿ ದೈವಗಳ ಹರಿಕೆ ಕೋಲಗಳು, ಏ. 7 ರಂದು ಗುಳಿಗನ ಕೋಲ, ಏ. 9 ರಂದು ಒತ್ತೆಕೋಲಕ್ಕೆ ಕೂಡುವದು, ಭಂಡಾರ ತೆಗೆಯುವದು, ಮೇಲೇರಿ ಕುಳ್ಚಾಟ ನಡೆಯಲಿದೆ. ಏ. 10 ರಂದು ಬೆಳಿಗ್ಗೆ ಶ್ರೀಮಹಾವಿಷ್ಣುಮೂರ್ತಿ ಒತ್ತೆಕೋಲ ಮತ್ತು ರುದ್ರಚಾಮುಂಡಿ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಜಾತ್ರೋತ್ಸವದ ಪ್ರಯುಕ್ತ ಮಲ್ನಾಡು ಸ್ವ-ಸಹಾಯ ಸಂಘದ ಪೆರಾಜೆ ಇದರ ವತಿಯಿಂದ ತಾ. 29 ರಂದು ಮುಕ್ತ ಕ್ರಿಕೆಟ್ ಪಂದ್ಯಾಟ, ಏ. 5 ರಂದು ಯಕ್ಷಗಾನ ಬಯಲಾಟ, ಏ. 9 ರಂದು ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ದೇವಳದ ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಕೋಡಿ, ಕಾರ್ಯದರ್ಶಿ ಅಶೋಕ ಪೀಚೆ ತಿಳಿಸಿದ್ದಾರೆ.