ಮಡಿಕೇರಿ, ಮಾ. 23: ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಇಂದು ವಿವಾಹವೊಂದು ನಡೆಯಿತು. ವರ ರವಿರಾಜ್ ಪಾರೆ ಅಪ್ಪಟ ಬ್ರಾಹ್ಮಣ, ವಧು ಅಮೇರಿಕಾ - ಹವಾೈ ದೇಶದ ಅನ್ನಾ ಕಾಲ್ನರ್.ಹವಾಯಿಯಲ್ಲಿ ಇಂಜಿನಿಯರ್ ಆಗಿರುವ ರವಿರಾಜ್ ಪಾರೆಗೆ ಅನ್ನಾ ಕಾಲ್ನರ್ ಮೇಲೆ ಪ್ರೇಮ ಅಂಕುರಿಸಿ ಇಂದು ಬ್ರಾಹ್ನಣ ಸಂಪ್ರದಾಯದಂತೆ ಮದುವೆ ನಡೆಯಿತು.ವಧುವಿನ ತಾಯಿ, ಆಪ್ತರು ಸೀರೆ ಹಾಗೂ ಪಂಚೆ ಧರಿಸಿ ಬಣ್ಣದ ಹೊರತಾಗಿ ಬೇರ್ಯಾವ ಸಾಂಪ್ರದಾಯಿಕ ವ್ಯತ್ಯಾಸ ಇಲ್ಲದಂತೆ ಶಾಸ್ತ್ರಗಳಲ್ಲಿ ಕುಳಿತು ಭಾಗವಹಿಸಿದರು. ನೆರೆದಿದ್ದವರಿಗೆ ಪನ್ನೀರು ಸಿಂಪರಣೆ, ಅಕ್ಷತೆ ವಿತರಣೆ ಎಲ್ಲವೂ ಅವರಿಂದಲೇ ನಡೆದು, ಮದುವೆ ಸಮಾರಂಭಕ್ಕೆ ವಿಶೇಷ ಮೆರುಗು ಬಂದಿತ್ತು. ರವಿರಾಜ್ ಪಾರೆ ಮಡಿಕೇರಿಯ ಭಾರತಿ ಮತ್ತು ಗಣೇಶ್ ಅವರ ಪುತ್ರ. ತನ್ನ ಉದ್ಯೋಗದೊಂದಿಗೆ ಸಾಹಸ ಕ್ರೀಡೆಗಳಲ್ಲೂ ಭಾಗವಹಿಸುವ ಈತ ಸೈಕಲಿನಲ್ಲಿ ಮಡಿಕೇರಿಯಿಂದ ದಕ್ಷಿಣ ಆಪ್ರಿಕಾದ ಕೇಪ್ ಟೌನ್‍ವರೆಗೆ ತೆರಳಿ ದಾಖಲೆ ಮಾಡಿದ್ದಾರೆ. ಅವರ ಪತ್ನಿ ಅನ್ನಾ ಕಾಲ್ನರ್ ಸಂಗೀತ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.