ಮಡಿಕೇರಿ, ಮಾ. 23: ಕಾಂತೂರು - ಮೂರ್ನಾಡುವಿನ ತೋಟ ವೊಂದರಲ್ಲಿ ಕಾಳುಮೆಣಸು ಕುಯ್ಯುತ್ತಿದ್ದ ವೇಳೆ, ತೋಟದ ಮಾಲೀಕರಿಗೆ ವಂಚಿಸಿ ಅಂದಾಜು ರೂ. 1.25 ಲಕ್ಷ ಮೌಲ್ಯದ ಕಾಳುಮೆಣಸು ಮಾರಾಟಗೊಳಿಸಿರುವ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ಸುಮಾರು 20 ದಿನಗಳಿಂದ ನಿತ್ಯ ಕಾರ್ಮಿಕರನ್ನು ಕರೆತಂದು ಕಾಳುಮೆಣಸು ಕುಯ್ಯಿಸುತ್ತಿದ್ದ ಅಜೀಜ್ ಎಂಬಾತ ಈ ಕೃತ್ಯ ಎಸಗಿರುವದಾಗಿ ತೋಟ ಮಾಲೀಕ ವಿನಾಯಕ ಎಂಬವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.ಆ ಮೇರೆಗೆ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಮಾರ್ಗ ದರ್ಶನದೊಂದಿಗೆ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಸ್ಥಳ ಮಹಜರು ನಡೆಸಿ ತನಿಖೆ
ಕೈಗೊಂಡಿರುವದಾಗಿ ತಿಳಿದುಬಂದಿದೆ. ಅದೇ ತೋಟದ ಕಾರ್ಮಿಕನೊಬ್ಬ ನಿತ್ಯವೂ ಕಾಳುಮೆಣಸು ಕಳವಿನ ಬಗ್ಗೆ ನೀಡಿರುವ ಸುಳಿವಿನಿಂದ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.