ಮಡಿಕೇರಿ, ಮಾ. 24: ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್‍ವೊಂದು (ಕೆ.ಎಂ 1 ಎಫ್. 8004) ಇಂದು ಮಧ್ಯಾಹ್ನ ಸುಂಟಿಕೊಪ್ಪ ಬಳಿ ಬೈಕ್‍ವೊಂದಕ್ಕೆ (ಕೆಎ 12 ಆರ್ 2709) ಡಿಕ್ಕಿಯಾದ ಪರಿಣಾಮ ಸವಾರ ನರಸೋಜಿ ಎಂಬವರಿಗೆ ಗಾಯಗಳಾಗಿವೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಾಯಾಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.