ಕರಿಕೆ, ಮಾ. 24: ಚೆತ್ತುಕಾಯ ಹಾಗೂ ಪಚ್ಚೆಪಿಲಾವ್‍ನಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. 40ಕ್ಕೂ ಅಧಿಕ ನಾಯಿಗಳು ಬಲಿಯಾಗಿವೆ. 4 ಜಾನುವಾರು, 3 ಆಡುಗಳ ಮೇಲೂ ಧಾಳಿ ಮಾಡಿದ್ದು, ಕೆಲ ಜಾನುವಾರು ಹಾಗೂ ಆಡುಗಳು ಅಂತ್ಯಕಂಡಿವೆ. ಚಿರತೆ ಹಾವಳಿಯಿಂದ ಈ ಭಾಗದ ಗ್ರಾಮದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆಗೆ ಬೋನ್ ಅಳವಡಿಸಿ ಕ್ರಮಕೈಗೊಳ್ಳುವದಾಗಿ ಡಿಸಿಎಫ್ ಮಂಜುನಾಥ್ ‘ಶಕ್ತಿ’ಗೆ ತಿಳಿಸಿದ್ದಾರೆ.
-ಸುಧೀರ್