ಕೂಡಿಗೆ, ಮಾ. 26 : ಕೂಡಿಗೆಯಲ್ಲಿ ಆರು ಗ್ರಾ. ಪಂ. ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಮಾವೇಶ ವನ್ನು ನಡೆಸುವ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ಕೂಡಿಗೆಯ ಮೂಡ್ಲಿಗೌಡ ಸಂಭಾಗಣ ದಲ್ಲಿ ಸಭೆ ನಡೆಯಿತು. ಜಿ. ಪಂ. ಮಾಜಿ ಅಧ್ಯಕ್ಷ ವಿ.ಎಂ.ವಿಜಯ, ತಾಲೂಕು ಬಿ.ಜೆ.ಪಿ. ಉಪಾಧ್ಯಕ್ಷ ಕೆ.ಕೆ ಭೋಗಪ್ಪ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ, ಕೂಡಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಿರೀಶ,

ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಚಂದ್ರು ಮೂಡ್ಲಿಗೌಡ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಎಂ ಬಿ. ಜಯಂತ್, ತಾಲೂಕು ಪಂಚಾಯಿತಿ ಸದಸ್ಯ ಗಣೇಶ, ಕೂಡಿಗೆ ಯುವ ಮೋರ್ಚದ ಅಧ್ಯಕ್ಷ ಚಿಣ್ಣಪ್ಪ, ಪ್ರಮುಖರಾದ ಕೆ.ವರದ, ಧನ್ನರಾಜ, ಶಶಿಕಿರಣ ಸೇರಿದಂತೆ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.