ಮಡಿಕೆÉೀರಿ, ಮಾ. 26: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಾಯೋಜಕತ್ವದಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ತಾ. 30 ರಿಂದ ಏ. 8ರ ವರೆಗೆ ಗುಡ್ಡೆಹೊಸೂರಿನ ಐಚೆಟ್ಟಿರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ಜಿಲ್ಲಾ ಫÀÅಟ್ಬಾಲ್ ಲೀಗ್ ಪಂದ್ಯಾವಳಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲೆ ಫÀÅಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಮಾತನಾಡಿ, ಜಿಲ್ಲೆಯ ಫÀÅಟ್ಬಾಲ್ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಫÀÅಟ್ಬಾಲ್ ಕ್ರೀಡೆಯನ್ನು ಕೊಡಗಿನಲ್ಲಿ ಮತ್ತಷ್ಟು ಬೆಳೆÉಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಫÀÅಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಅಸೋಸಿಯೇಷನ್‍ನೊಂದಿಗೆ ನೋಂದಣಿಯಾಗಿರುವ ಜಿಲ್ಲೆಯ 18 ತಂಡಗಳು ಪಾಲ್ಗೊಳ್ಳಲಿರುವದಾಗಿ ತಿಳಿಸಿದರು.

ಆರಂಭಿಕ ದಿನವಾದ ತಾ. 30 ರಂದು ಬೆಳಿಗ್ಗೆ 9.30 ಗಂಟೆಗೆ ಇಂಡಿಯಲ್ ಆಯಿಲ್ ಕಾರ್ಪೋರೇಷನ್‍ನ ಉನ್ನತ ಅಧಿಕಾರಿಗಳು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯಗಳು ಏಪ್ರಿಲ್ 6 ರಂದು, ಸೆಮಿಫೈನಲ್ ಪಂದ್ಯಗಳು ಏಪ್ರಿಲ್ 7 ರಂದು ಮತ್ತು ಅಂತಿಮ ಪಂದ್ಯ ಏಪ್ರಿಲ್ 8 ರಂದು ಮಧ್ಯಾಹ್ನ 3.30 ಗಂಟೆಗೆ ನಡೆಯಲಿವೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನÀಗದು ಬಹುಮಾನ ಮತ್ತು ವೈಯಕ್ತಿಕ ಬಹುಮಾನಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್

ಪ್ರಾಯೋಜಿಸಿರುವದಾಗಿ ಮಾಹಿತಿಯನ್ನಿತ್ತರು.

ಹಣ ಮಾಡುವ ಪಂದ್ಯಗಳಿಂದ ಬೆಳವಣಿಗೆ ಇಲ್ಲ

ಕೊಡಗು ಜಿಲ್ಲಾ ಫÀÅಟ್ಬಾಲ್ ಅಸೋಸಿಯೇಷನ್‍ಗೆ ಜಿಲ್ಲೆÉಯ ಎಲ್ಲಾ ಫÀÅಟ್ಬಾಲ್ ಸಂಸ್ಥೆಗಳು ನೋಂದಣಿಯಾಗಬೇಕೆಂದು ಮನವಿ ಮಾಡಿದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಪ್ರಸ್ತುತ ಬಹಳಷ್ಟು ಪಂದ್ಯಾವಳಿಗಳು ಕೇವಲ ಹಣ ಮಾಡುವದಕ್ಕೆ ಸೀಮಿತವಾಗಿದೆ. ಇಂತಹ ಪಂದ್ಯಾವಳಿಗಳಿಂದ ಯುವ ಫÀÅಟ್ಬಾಲ್ ಆಟಗಾರರ ಬೆಳವಣಿಗೆ ಅಸಾಧ್ಯವೆಂದು ವಿಷಾಧಿಸಿ, ಅಸೋಸಿಯೇಷನ್‍ನಲ್ಲಿ ತಂಡಗಳು ನೋಂದಣಿಯಾಗುವ ಮೂಲಕ ಆಟಗಾರರ ಬೆಳವಣಿಗೆಗೆ ಮುಂದಾಗುವದು ಅವಶ್ಯವೆಂದರು.

ಅಸೋಸಿಯೇಷನ್‍ನ ಕಾರ್ಯದರ್ಶಿ ಐಚೆಟ್ಟಿರ ಪೊನ್ನಪ್ಪ ಮಾತನಾಡಿ, ಅಸೋಸಿಯೇಷನ್‍ನಲ್ಲಿ ಫÀÅಟ್ಬಾಲ್ ಸಂಸ್ಥೆಗಳು ನೋಂದಣಿಯಾದಲ್ಲಿ, ಆ ಸಂಸ್ಥೆಯ ಆಟಗಾರರು ಜಿಲ್ಲಾ ಮಟ್ಟದ ಅಧಿಕೃತ ಪಂದ್ಯಾವಳಿಗಳಲ್ಲಿ ಆಟವಾಡುವ ಅವಕಾಶವನ್ನು ಪಡೆಯುವ ಮೂಲಕ, ಜಿಲ್ಲಾ ತಂಡದಲ್ಲಿ ಪಾಲ್ಗೊಂಡು ರಾಜ್ಯ ಮಟ್ಟದ ಪಂದ್ಯಾವಳಿ ಸೇರಿದಂತೆ ಪ್ರತಿಷ್ಠಿತ ಸಂತೋಷ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯಲು ಸಾಧ್ಯವಿದೆ. ಇದರೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿದೆಯೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಫುಟ್ಬಾಲ್ ಅಸೋಸಿಯೇಷನ್‍ನ ಕೊಡಗು ಜಿಲ್ಲಾ ಪ್ರತಿನಿಧಿ ಜಗದೀಶ್ ಉಪಸ್ಥಿತರಿದ್ದರು.