*ಗೋಣಿಕೊಪ್ಪಲು, ಮಾ. 26: ಕೀಲೇರಿ ಮುತ್ತಪ್ಪ ಮಠಪುರ ಮುತ್ತಪ್ಪ ದೇವರ ಉತ್ಸವ ತಾ.29 ರಿಂದ 31ರವರೆಗೆ ನಡೆಯಲಿದೆ.

ತಾ.29ರಂದು ಗುರುವಾರ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ತಾ.30 ಹಾಗೂ 31 ರಂದು ದೇವರ ಉತ್ಸವ ತೆರೆಗಳು ನಡೆಯಲಿದೆ. 30ರಂದು ಸಂಜೆ 6:30ಕ್ಕೆ ಕಾರಣೋರ್ ವೆಳ್ಳಾಟಂ, 7:30 ಮುತ್ತಪ್ಪನ್ ವೆಳ್ಳಾಟಂ, 8:00 ಗಂಟೆಗೆ ಗುಳಿಗನ್ ವೆಳ್ಳಟಾಂ, 10:00 ಗಂಟೆಗೆ ಕಂಡಕರ್ಣನ್ ವೆಳ್ಳಾಟಂ, 10:30 ವಸುರಿಮಲಾ ವೆಳ್ಳಾಟಂ, 11:00 ಗಂಟೆ ವಿಷ್ಣು ಮೂರ್ತಿ, 11:30 ಪೆÇೀದಿ, 12 ಗಂಟೆಗೆ ತಿರುವಪ್ಪನ್ ವೆಳ್ಳಾಟಂ ಹಾಗೂ ರಾತ್ರಿ 12:30 ಗಂಟೆಗೆ ಕಳಸ ಸ್ವಾಗತ ನಡೆಯಲಿದೆ. ತಾ. 31ರಂದು ಬೆಳಿಗ್ಗೆ 2 ಗಂಟೆಗೆ ಗುಳಿಗೆನ ತೆರೆ, 3 ಗಂಟೆಗೆ ಕಂಡಕರ್ಣನ ತೆರೆ, 4:30ಕ್ಕೆ ತಿರುವಪ್ಪನ್ ತೆರೆ, 5 ಗಂಟೆಗೆ ಪೆÇೀದಿ ತೆರೆ, 5:30 ಕಾರಣೋರ್ ತೆರೆ, 6 ಗಂಟೆಗೆ ವಸುರಿಮಲೆ ತೆರೆ, 6:30ಕ್ಕೆ ವಿಷ್ಣು ಮೂರ್ತಿ ತೆರೆ ನಡೆಯಲಿದೆ. ತಾ. 29 ಮತ್ತು 30ರಂದು ರಾತ್ರಿ 8 ಗಂಟೆಗೆ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ನಾಪೋಕ್ಲು: ಇಲ್ಲಿಗೆ ಸಮೀಪದ ಕೊಳಕೇರಿ ಬೊಮ್ಮಂಕೇರಿಯ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ತಾ. 27 ರಿಂದ 29 ರವರೆಗೆ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲ್ಲಿದ್ದು ಬುಧವಾರ ಸಂಜೆ ಆರು ಗಂಟೆಗೆ ಮುತ್ತಪ್ಪ ದೇವರ ಕಳಸ,ಬಳಿಕ ಪವಿತ್ರ ಕೋಟೆರಿ ನದಿಯಲ್ಲಿ ಸ್ನಾನ ಬಳಿಕ ಕೇರಳದ ಪ್ರಖ್ಯಾತ ಚಂಡೆಯೊಂದಿಗೆ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಆಗಮಿಸಿದ ನಂತರ ಮುತ್ತಪ್ಪ ದೇವರ ಬೊಳ್ಳಾಟಂ ಜರುಗಲಿದೆ.ಗುರುವಾರ ಬೆಳಿಗ್ಗೆ ತಿರುವಪ್ಪನೆ ಮತ್ತು ಮುತ್ತಪ್ಪ ತೆರೆಗಳು ಜರುಗಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.