ಮಡಿಕೇರಿ, ಮಾ. 26: ಚುನಾವಣಾ ಆಧಿಸೂಚನೆ ಪ್ರಕಟಕೊಂಡ ದಿನದಿಂದ ಕಾನೂನು ಬಾಹಿರವಾಗಿ ಮುದ್ರಣ ಮಾಡಿದರೆ ಕ್ರಿಮಿನಲ್ ಆಪಾದನೆಯಾಗುತ್ತದೆ ಎಂದು ಪಿ.ಐ. ಶ್ರೀವಿದ್ಯಾ ಸೂಚನೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ 2018ರ ಸಂಬಂಧ ಚುನಾವಣೆಗೆ ಸಂಬಂಧಿಸಿದ ಕರಪತ್ರ ಮತ್ತು ಪೋಸ್ಟರ್‍ಗಳನ್ನು ಮುದ್ರಿಸುವಾಗ ಅಥವಾ ಪ್ರಕಟಣೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಗಳನ್ನು ಮುದ್ರಿಸುವಾಗ ಅದರಲ್ಲಿ ಮುದ್ರಿಸುವವರ ಹೆಸರು, ವಿಳಾಸ ಮತ್ತು ಎಷ್ಟು ಪ್ರತಿಗಳನ್ನು ಮುದ್ರಿಸಲಾಗಿದೆ ಎಂಬದರ ಬಗ್ಗೆ ನಿಖರ ಮಾಹಿತಿ ಇರಬೇಕು ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಚುನಾವಣಾ ಅಧಿಸೂಚನೆ ಪ್ರಕಟ ವಾದಾಗ ಮುದ್ರಕರು ಯಾವ ರೀತಿ ಪ್ರತಿಯನ್ನು ಮುದ್ರಣ ಮಾಡಬೇಕು ಎಂಬದನ್ನು ಭಾರತ ಸರ್ಕಾರದ 1951 ಕಾಯ್ದೆ 127ಎ ಸೆಕ್ಷನ್ ತಿಳಿಸುತ್ತದೆ. ಈ ಆದೇಶವನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ಅಧಿಕ ಪ್ರತಿಗಳನ್ನು ಮುದ್ರಿಸಬಾರದು. ಒಂದು ವೇಳೆ ಕಾನೂನು ಬಾಹಿರವಾಗಿ ಪ್ರತಿಗಳನ್ನು ಮುದ್ರಿಸಿದರೆ 6 ತಿಂಗಳ ವರೆಗೆ ಶಿಕ್ಷೆ ಮತ್ತು 2 ಸಾವಿರ ದಂಡ ನೀಡಬೇಕಾಗುತ್ತದೆ. ಪ್ರಕಾಶಕರು ಪ್ರತಿಗಳನ್ನು ಮುದ್ರಿಸುವಾಗ ಹೆಸರು, ವಿಳಾಸ, ದಿನಾಂಕ ಮತ್ತು ಪ್ರತಿಗಳ ಸಂಖ್ಯೆ ಇವುಗಳನ್ನು ಮುದ್ರಣಾಲಯದ ಮುದ್ರಕರು ಗಮನದಲ್ಲಿಡಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಚುನಾವಣೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ವಿಚಾರಗಳ ಮೇಲೆ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮವಹಿಸುತ್ತೇವೆ. ಹಾಗೆಯೇ ತಾಂತ್ರಿಕವಾಗಿ ಎಚ್ಚರವಹಿಸ ಬೇಕಾಗಿದೆ ಎಂದು ತಿಳಿಸಿದರು. ಜಿ.ಪಂ. ಸಿ.ಇ.ಓ. ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಚುನಾವಣೆಗೆ ಸಂಬಂಧಿಸಿ ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಬೂತ್‍ಗಳನ್ನು ನಿರ್ಮಿಸ ಲಾಗಿದ್ದು, ಮಡಿಕೇರಿ ವ್ಯಾಪ್ತಿಯಲ್ಲಿ 3 ಬೂತ್‍ಗಳು ಹಾಗೆಯೇ ವೀರಾಜಪೇಟೆ ಯಲ್ಲಿ 5 ಬೂತ್‍ಗಳನ್ನು ಒಟ್ಟು 8 ಬೂತ್‍ಗಳನ್ನು ಹೆಚ್ಚುವರಿ ಮಾಡ ಲಾಗಿದೆ ಎಂದು ತಿಳಿಸಿದರು. ಪೊಲೀಸ್ ಅಧಿಕಾರಿ ಯತೀಶ್, ವಿವಿಧ ಸಂಸ್ಥೆಯ ಪ್ರಕಾಶಕರು, ಇತರರು ಇದ್ದರು.