ಸೋಮವಾರಪೇಟೆ, ಮಾ. 26: ಅರಣ್ಯ ಅಭಿವೃದ್ಧಿ ನಿಗಮದ ಮೂಲಕ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಜೆಗುಂಡಿ ಗ್ರಾಮದ 10 ಮಂದಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ವಿತರಿಸಲಾಯಿತು. ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಗ್ರಾಮದ 10 ಫಲಾನುಭವಿ ಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಿದ್ದಾರೆ ಎಂದು ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ತಿಳಿಸಿದರು. ಗ್ರಾ. ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯರಾದ ವೀಣಾ, ಕವಿತ ಉಪಸ್ಥಿತರಿದ್ದರು.ಮೇಕೇರಿ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಅಡುಗೆ ಅನಿಲ ವಿತರಣಾ ಕಾರ್ಯಕ್ರಮ ಮೇಕೇರಿಯಲ್ಲಿ ನಡೆಯಿತು. ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಸಮ್ಮುಖದಲ್ಲಿ ಹಾಕತ್ತೂರು ಗ್ರಾಮದ 10 ಫಲಾನುಭವಿಗಳು ಮತ್ತು ಮೇಕೇರಿ ಪಂ. ವ್ಯಾಪ್ತಿಯ 9 ಫಲಾನುಭವಿಗಳಿಗೆ ಗ್ರಾ.ಪಂ. ಸದಸ್ಯರಾದ ಪಿಯೂಶ್ ಪೆರೇರಾ ಅವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.