ಸೋಮವಾರಪೇಟೆ,ಮಾ.26: ಸ್ತ್ರೀ ಶಕ್ತಿ ಸಂಘಟಿತವಾಗಿ ಹೋರಾಟಕ್ಕೆ ಧುಮುಕಿದರೆ ಮಾತ್ರ ಮಹಿಳಾ ದೌರ್ಜನ್ಯಕ್ಕೆ ತಡೆ ಹಾಕಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಶಾರದ ರಾಮನ್ ಅಭಿಪ್ರಾಯಿಸಿದರು.

ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರು ಭದ್ರತೆಯಿಲ್ಲದ ನೌಕರಿಯಿಂದ ಶೋಷಣೆಗೆ ತುತ್ತಾಗುವ ಸಂಭವ ಹೆಚ್ಚಿದೆ. ಇಂತಹ ಅನೇಕ ದೂರುಗಳು ಇಲಾಖೆಗೆ ಬರುತ್ತವೆ. ಮಹಿಳೆಯರು ಶೈಕ್ಷಣಿಕವಾಗಿ ಮುಂದುವರೆದರೆ ಸಮಾಜದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದು ಶಾರದ ರಾಮನ್ ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ನಳಿನಿ ಗಣೇಶ್ ವಹಿಸಿದ್ದರು. ಸಮಾಜ ಸೇವಕಿ ರಾಣಿ ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಸಂಘದ ಉಪಾಧ್ಯಕ್ಷೆ ಶೋಭ ಶಿವರಾಜ್, ಕಾರ್ಯದರ್ಶಿ ಗಾಯಿತ್ರಿ ನಾಗರಾಜ್, ಪದಾಧಿಕಾರಿಗಳಾದ ಜಲಜಾ ಶೇಖರ್, ಸುಮಾ ಸುದೀಪ್, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ಶೋಭ ಯಶ್ವಂತ್, ಜ್ಯೋತಿ ಶುಭಾಕರ್, ಲತ ಮಂಜು ಇದ್ದರು. ದಿನದ ಅಂಗವಾಗಿ ಸಂಘದ ಸದಸ್ಯರುಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಘು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.