ಚೆಟ್ಟಳ್ಳಿ, ಮಾ. 27: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸೋಮವಾರಪೇಟೆ ಉಪವಲಯದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಹುಣುಸೂರು ವನ್ಯಜೀವಿ ವಿಭಾಗದ ನುರಿತ ವೈದ್ಯಾಧಿಕಾರಿ ಡಾ. ಮುಜೀಬ್ ಅವರ ಮಾರ್ಗದರ್ಶನದಂತೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಸಲಾಯಿತು. ಈರಳೆವಳಮುಡಿ ಗ್ರಾಮದಲ್ಲಿ 16 ರಿಂದ 18 ಕಾಡಾನೆಗಳ ಗುಂಪು ಸುತ್ತಲಿನ ಕಾಫಿ ತೋಟಗಳಲ್ಲೇ ಬೀಡುಬಿಟ್ಟಿವೆ.
ಹಲವು ಬಾರಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಚೆಟ್ಟಳ್ಳಿ, ಮಾ. 27: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಸೋಮವಾರಪೇಟೆ ಉಪವಲಯದ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಹುಣುಸೂರು ವನ್ಯಜೀವಿ ವಿಭಾಗದ ನುರಿತ ವೈದ್ಯಾಧಿಕಾರಿ ಡಾ. ಮುಜೀಬ್ ಅವರ ಮಾರ್ಗದರ್ಶನದಂತೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಸಲಾಯಿತು. ಈರಳೆವಳಮುಡಿ ಗ್ರಾಮದಲ್ಲಿ 16 ರಿಂದ 18 ಕಾಡಾನೆಗಳ ಗುಂಪು ಸುತ್ತಲಿನ ಕಾಫಿ ತೋಟಗಳಲ್ಲೇ ಬೀಡುಬಿಟ್ಟಿವೆ.
ಹಲವು ಬಾರಿ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ಕಾಡಾನೆಗಳ ಗುಂಪಿನೆಡೆಗೆ ಅರಣ್ಯ ಅಧಿಕಾರಿಗಳ ತಂಡ ಹಾಗೂ ಸಾಕಾನೆಗಳು ಧಾವಿಸುತಿದ್ದಂತೆ ಗಾಬರಿಗೊಂಡ ಕಾಡಾನೆ ಮೋದೂರು ತೋಟದಿಂದ ಓಡಲಾರಂಭಿಸಿತು.
ಆನೆಯ ಮೇಲಿಂದ ಸಿಬ್ಬಂದಿ ಅರವಳಿಕೆ ಮದ್ದಿನ ಗುಂಡು ಹಾರಿಸಿದರು. ಒಟ್ಟಿಗಿದ್ದ ಕಾಡಾನೆಗಳು ಓಡ ತೊಡಗಿದರೆ ಅರವಳಿಕೆ ಮದ್ದಿನ ಗುಂಡು ತಾಗಿದ 25 ರಿಂದ 30 ವರ್ಷದ ಹೆಣ್ಣಾನೆ ಬದಲೆರ ಕೌಶಿಕ್ ಅವರ ತೋಟದಲ್ಲಿ ನಿಂತಿತ್ತು. ಸಾಕಾನೆಗಳಾದ ಭೀಮ ಹಾಗೂ ಅಭಿಮನ್ಯುವಿನ ಸಹಾಯದಿಂದ ಹಿಡಿದು ಅರಣ್ಯ ಸಿಬ್ಬಂದಿಗಳು ಗಂಟಲಿಗೆ ರೇಡಿಯೋ ಕಾಲರ್ ಅಳವಡಿಸಿದರು. ಡಾ. ಮುಜೀಬ್ ಆಂಟಿಡೋಟ್ ನೀಡಿ ಕಾಡಾನೆಯನ್ನು ಬಿಡಲಾಯಿತು. ಗಾಬರಿಗೊಂಡ ಕಾಡಾನೆ ಸುತ್ತಲಿನವರ ಮೇಲೆ ಬರುತ್ತಿದ್ದಂತೆ ಸುತ್ತಲಿದ್ದ ಸಿಬ್ಬಂದಿಗಳು ಓಡ ತೊಡಗಿದರು.
ವಾರದ ಹಿಂದೆ ವೀರಾಜಪೆಟೆ ವಲಯದಲ್ಲಿ ಕಾರ್ಯಾಚರಣೆ ಮೂಲಕ ಎರಡು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಿಡಿಸಿದ್ದು, ಇದು ಮೂರನೆಯದ್ದಾಗಿದೆ.
ನಾಳೆ ಕುಶಾಲನಗರ ವಲಯದ ಮತ್ತೊಂದು ತಂಡದ ಕಾಡಾನೆಯೊಂದಕ್ಕೆ ರೆಡಿಯೋ ಕಾಲರ್ ಅಳವಡಿಸಲು ಅರಣ್ಯ ಸಿಬ್ಬಂದಿಗಳು ಸಿದ್ಧತೆ ನಡೆಸುತ್ತಿದ್ದ್ದಾರೆ.
-ಕರುಣ್ ಕಾಳಯ್ಯ,ಪಪ್ಪುತಿಮ್ಮಯ್ಯ