ಮಡಿಕೇರಿ, ಮಾ. 27: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಡೆದ, ನಡೆಯಲಿರುವ ಧಾರ್ಮಿಕ, ದೈವಿಕ ಕಾರ್ಯಕ್ರಮಗಳ ವಿವರ.‘ರಾಮ-ಹನುಮ ಶಕ್ತಿ ಜಾಗೃತಗೊಳ್ಳಬೇಕು’

ಸೋಮವಾರಪೇಟೆ: ಅಧರ್ಮೀ ಶಕ್ತಿಗಳ ವಿರುದ್ಧ ಹೋರಾಡಲು ಹಿಂದೂ ಸಮಾಜದಲ್ಲಿ ರಾಮ ಹಾಗೂ ಹನುಮರ ಶಕ್ತಿಗಳು ಜಾಗೃತಗೊಳ್ಳಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಕರೆ ನೀಡಿದರು.

ಹಿಂದೂ ಜಾಗರಣಾ ವೇದಿಕೆ ಹಾಗೂ ಶ್ರೀರಾಮನವಮಿ ಉತ್ಸವ ಸಮಿತಿ ಆಶ್ರಯದಲ್ಲಿ ಇಲ್ಲಿನ ಆಂಜನೇಯ ದೇವಾಲಯದಲ್ಲಿ ಆಯೋಜಿಸಲಾಗಿದ್ದ ರಾಮನವಮಿ ಉತ್ಸವ-ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ರಾಕ್ಷಸೀ ಪ್ರವೃತ್ತಿಗಳು ಹೆಚ್ಚುತ್ತಿವೆ. ಮತಾಂತರ, ಲವ್‍ಜಿಹಾದ್, ಗೋಹತ್ಯೆ ಸೇರಿದಂತೆ ಹಿಂದೂ ಸಮಾಜದ ಮೇಲೆ ಇನ್ನಿಲ್ಲದ ಆಕ್ರಮಣ ನಡೆಯುತ್ತಿದೆ. ಇವುಗಳನ್ನು ತಡೆಗಟ್ಟಲು ಪ್ರತಿ ಹಿಂದೂವಿನ ಹೃದಯದಲ್ಲೂ ರಾಮ-ಹನುಮಂತರ ಶಕ್ತಿ ಜಾಗೃತಿಯಾಗಬೇಕು. ಆದರ್ಶಪುರುಷನ ಗುಣಗಳನ್ನು ಮೈಗೂಡಿಸಿಕೊಳ್ಳುವದರೊಂದಿಗೆ ಅಧರ್ಮೀ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದು ಅವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಂ ಅವರುಗಳು ಉಪಸ್ಥಿತರಿದ್ದರು.

ಪಟ್ಟಣದಲ್ಲಿ ಭವ್ಯ ಶೋಭಾಯಾತ್ರೆ: ಜಾಗೃತಿ ಕಾರ್ಯಕ್ರಮದ ನಂತರ ದೇವಾಲಯದಿಂದ ಹೊರಟ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ತೋಳೂರುಶೆಟ್ಟಳ್ಳಿಯ ಸುಗ್ಗಿ ಕುಣಿತ, ಕಲ್ಲಡ್ಕದ ಗೊಂಬೆ ಕುಣಿತ, ಪುತ್ತೂರಿನ ವಿಶಿಷ್ಟ ನೃತ್ಯ ತಂಡಗಳೊಂದಿಗೆ ಸೋಮವಾರಪೇಟೆ ನಗರ, ರೇಂಜರ್ ಬ್ಲಾಕ್, ಬಜೆಗುಂಡಿ, ಯಡೂರು, ಶಾಂತಳ್ಳಿ, ಗೌಡಸಮಾಜ ರಸ್ತೆ, ಆಲೇಕಟ್ಟೆ ರಸ್ತೆ, ಹಾನಗಲ್ಲು, ಕಾನ್ವೆಂಟ್ ಬಾಣೆ ಗ್ರಾಮಗಳಿಂದ ಆಗಮಿಸಿದ ಶ್ರೀರಾಮನ ರಥಗಳ ಮೆರವಣಿಗೆ ಆಕರ್ಷಕವಾಗಿತ್ತು.

ಭಗವತಿ ಉತ್ಸವ ಸಂಪನ್ನ

ನಾಪೆÇೀಕ್ಲು: ತಾ. 22 ರಂದು ಆರಂಭಗೊಂಡ ವೆಸ್ಟ್ ಕೊಳಕೇರಿ ಶ್ರೀ ಭಗವತಿ ದೇವಿಯ ಉತ್ಸವ ತಾ. 26 ರಂದು ನಡೆದ ಬೇಟೆಗಾರ ಅಯ್ಯಪ್ಪ ದೇವರ ಪೂಜೆಯೊಂದಿಗೆ ಸಂಪನ್ನಗೊಂಡಿತು.

ಉತ್ಸವದ ಅಂಗವಾಗಿ ತಾ. 22 ರಂದು ರಾತ್ರಿ ದೀಪಾರಾಧನೆ, ತಾ. 23 ರಂದು ಪಟ್ಟಣಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ದೇವಿಯ ಬಲಿ, ಮಧ್ಯಾಹ್ನ ಎತ್ತೇರಾಟ, ಸಂಜೆ ತೂಚಂಬಲಿ, ನೃತ್ಯ ನಡೆಯಿತು. ತಾ. 24 ರಂದು ಸಂಜೆ ಉತ್ಸವ ಮೂರ್ತಿಯ ಅವಭೃತ ಸ್ನಾನ, ನೃತ್ಯ ಬಲಿ, ತಾ. 25 ರಂದು ದೇವಳದಲ್ಲಿ ಶುದ್ಧ ಕಲಶ, ತಾ. 26 ರಂದು ಬೇಟೆಗಾರ ಅಯ್ಯಪ್ಪ ದೇವರ ಪೂಜೆ ನಡೆಯಿತು.

ದೇವಾಲಯ ವಾರ್ಷಿಕೋತ್ಸವ

ಸಿದ್ದಾಪುರ: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವ ಹಾಗೂ ದೇವರ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು. ನೆಲ್ಲಿಹುದಿಕೇರಿಯ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ಹಾಗೂ ಪೂಜಾ ಕೈಂಕರ್ಯಗಳು 3 ದಿನಗಳ ಕಾಲ ನಡೆದವು. ಅಲ್ಲದೇ ದೇವರ ಬಲಿ ಬರುವದು ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. 3 ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರತಿಷ್ಠಾಪನಾ ಮಹೋತ್ಸವ

ಸುಂಟಿಕೊಪ್ಪ: ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಶಕ್ತಿ ಮಹಾ ಗಣಪತಿ ದೇವಸ್ಥಾನದಲ್ಲಿ ಶ್ರೀ ಪಾರ್ವತಿ ಲಕ್ಷ್ಮಿ ಸರಸ್ವತಿ ಶ್ರೀ ಅಯ್ಯಪ್ಪ, ನಾಗ ಮತ್ತು ಶ್ರೀ ಆಂಜನೇಯ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವ ತಾ. 29 ರಿಂದ 30 ವರೆಗೆ ನಡೆಯಲಿದೆ.

ತಾ. 29 ರಂದು ಗುರುವಾರ ಸಂಜೆ 6 ಗಂಟೆಗೆ ಯಾಗ ಶಾಲಾ ಪ್ರವೇಶ ಗಂಗೆ ಪೂಜೆ, ಪುಣ್ಯಾಹ, ದೇವನಾಂದಿ, ಕಲಶ ಸ್ಥಾಪನೆ, ಜಲಾವಿಲಾಸ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

ತಾ. 30 ರಂದು ಸಂಜೆ 6 ಗಂಟೆಗೆ ವೇದ ಪಾರಾಯಣ, ನಿತ್ಯವಿಧಿಗಳು, ಶ್ರೀ ಗಣಪತಿ ಹೋಮ, ಅದಿತಾಧಿ ನವಗ್ರಹ ಹೋಮ, ಮೂಲಮಂತ್ರ ಹೋಮ, ಕಲಾಹೋಮ, ನೇತ್ರೋಮಿಲನ ಪುಷ್ಪಾಹುತಿ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಪ್ರಧಾನ ಅರ್ಚಕರರಾದ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ, ದೊಳ್ಳಪುರದ, ಡಾ. ಟಿ.ಎಸ್. ರಾಮನಾಥ (ಶರ್ಮ) ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿದೆ.

ಸತ್ಯನಾರಾಯಣ ಪೂಜೆ

ಸೋಮವಾರಪೇಟೆ: ಇಲ್ಲಿನ ಶ್ರೀರಾಮ ಮಂದಿರ ಕುರುಹಿನ ಶೆಟ್ಟಿ ಸೀತಾಬಳಗದ ವತಿಯಿಂದ ತಾ. 31 ರಂದು ವಾರ್ಷಿಕ ಸತ್ಯನಾರಾಯಣ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಸತ್ಯನಾರಾಯಣ ಪೂಜೆ ಪ್ರಾರಂಭಗೊಳ್ಳಲಿದ್ದು, ನಂತರ ಭಜನೆ, ಮಹಾಮಂಗಳಾರತಿ, ಅನ್ನದಾನ ನಡೆಯಲಿದೆ ಎಂದು ಬಳಗದ ಅಧ್ಯಕ್ಷೆ ಉಮಾ ಗಣಪತಿ ತಿಳಿಸಿದ್ದಾರೆ.ಕುಂಜಿಲ ಉರೂಸ್‍ಗೆ ತಾ. 30 ರಂದು ಚಾಲನೆ

ಮಡಿಕೇರಿ: ಕುಂಜಿಲ ಪಯ್‍ನರಿ ಜಮಾಅತ್ ಆಡಳಿತ ಮಂಡಳಿ ಹಾಗೂ ಪಯ್‍ನರಿ ಸ್ವಲಾತ್ ಸಮಿತಿ ಆಶ್ರಯದಲ್ಲಿ ತಾ. 28 ರಂದು ಕುಂಜಿಲ ಪಯ್‍ನರಿ ವಲಿಯುಲ್ಲಾಹ್ ದರ್ಗಾದ ಸಭಾಂಗಣದಲ್ಲಿ ಪಯ್‍ನರಿ ಮಾಸಿಕ ಸ್ವಲಾತ್‍ನ 3ನೇ ಮಹಾಸಮ್ಮೇಳನ ನಡೆಯಲಿದ್ದು, ತಾ. 30 ರಿಂದ ಏ. 3 ರವರೆಗೆ ಉರೂಸ್ ಮುಬಾರಕ್ ಜರುಗಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸ್ವಲಾತ್ ಸಮಿತಿ ಕಾರ್ಯದರ್ಶಿ ಪಿ.ಎಂ.ಎ. ಅಜೀಜ್ ಮಾಸ್ಟರ್ ಕುಂಜಿಲದ ಪಯ್‍ನರಿ ದರ್ಗಾದಲ್ಲಿ ಪ್ರವಾದಿ ಕುಟುಂಬದ ಅಸ್ಸಯ್ಯಿದ್ ಮುಹ್ಸಿನ್ ಸೈದಲವಿ ಕೋಯಾ ಅಲ್‍ಬುಖಾರಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಪಯ್‍ನರಿ ಮಾಸಿಕ ಸ್ವಲಾತ್‍ನ 3ನೇ ಮಹಾಸಮ್ಮೇಳನ ತಾ. 28 ರ ಸಂಜೆ 7 ಗಂಟೆಗೆ ನಡೆಯಲಿದೆ ಎಂದರು.

ಬಾಯಾರ್ ತಂಞಳ್ ಎಂದೇ ಖ್ಯಾತರಾಗಿರುವ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಅಲ್‍ಬುಖಾರಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಕೇರಳ ವಕ್ಫ್ ಬೋರ್ಡ್ ನಿರ್ದೇಶಕ ಅಸ್ಸಯ್ಯಿದ್ ಇಂಬಿಚ್ಚಿಕೋಯ ಬಾ ಅಲವಿ ಉದ್ಘಾಟಿಸಲಿದ್ದು, ಮಂಜನಾಡಿಯ ಶರಫ್ರಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್, ಜಿಲ್ಲಾ ನಾಯಿಬ್ ಖಾಝಿ ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ಲಾ ಫೈಝಿ ಮತ್ತಿತರರು ಭಾಗವಹಿಸುವ ಸಭೆಯಲ್ಲಿ ಪ್ರಸಿದ್ಧ ಸೂಫಿವರ್ಯ ಆಟ್ಟುಪುರಂ ಶೈಖುನಾ ಅಲಿ ಬಾಖವಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲೆಯ ಮುಸ್ಲಿಂ ಜಮಾಅತ್‍ಗಳಲ್ಲಿ ಖ್ಯಾತಿ ಪಡೆದ ಪಯ್‍ನರಿ ಜಮಾಅತ್ ಪಯ್‍ನರಿ ವಲಿಯುಲ್ಲಾಹ್‍ರವರ ಪವಾಡಗಳಿಂದ ಮಾದರಿ ಜಮಾಅತ್ ಆಗಿ ಮಾರ್ಪಟ್ಟಿದ್ದು, ಜಮಾಅತ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಮದ್ರಸಗಳು, ಸಮಾಜ ಸೇವೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿಕೊಂಡು ಕಾರುಣ್ಯ ಪ್ರವರ್ತನ ನಡೆಸುವ ರಿಲೀಫ್ ಫಂಡ್, ಸಲಹಾ ಸಮಿತಿ, ಸ್ವಲಾತ್ ಸಮಿತಿ ಮುಂತಾದ ಪ್ರತಿಯೊಂದು ರಂಗದಲ್ಲೂ ದೂರದೃಷ್ಟಿಯಿಟ್ಟುಕೊಂಡು ಬಡ ಮತ್ತು ಅನಾಥರ ಕಣ್ಣೀರೊರೆಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಪ್ರತೀ ವರ್ಷದಂತೆ ಈ ವರ್ಷವೂ ಪಯ್‍ನರಿ ವಲಿಯುಲ್ಲಾಹ್ ಉರೂಸ್ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ತಾ. 30 ರಿಂದ ಏ. 3 ರವರೆಗೆ ನಡೆಯಲಿದೆ. ತಾ. 30 ರಂದು ಜಮಾಅತ್ ಅಧ್ಯಕ್ಷ ಎ.ಎ. ಮುಹಮ್ಮದ್ ಹಾಜಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬಳಿಕ ಸಾಮೂಹಿಕ ಪ್ರಾರ್ಥನೆ, ರಾತ್ರಿ ಪ್ರಸಿದ್ಧ ಬಹುಭಾಷಾ ಪಂಡಿತ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಅವರಿಂದ ಕುಟುಂಬ ಜೀವನ ಎಂಬ ವಿಷಯದ ಕುರಿತು, 31ರಂದು ರಾತ್ರಿ ಏಲಗುಳಂ ಅಬ್ದುರ್ರಷಿದ್ ಸಖಾಫಿ, ಏ. 1 ರಂದು ತಿರುವನಂತಪುರಂನ ನವಾಜ್ ಮನ್ನಾನಿ ಉಪನ್ಯಾಸ ನೀಡಲಿದ್ದಾರೆ.

ಏ. 2 ರಂದು ಉರೂಸ್‍ನ ಪ್ರಧಾನ ದಿನವಾಗಿದ್ದು, ಅಂದು ಮಧ್ಯಾಹ್ನ ಭೌತಿಕ ಹಾಗೂ ಧಾರ್ಮಿಕ ವಿದ್ಯಾಂಸ ಡಾ. ಫಾರೂಕ್ ನೀಮಿ ಕೊಲ್ಲಂ ಭಾಷಣ ಮಾಡಲಿದ್ದು, ಅಂದು ರಾತ್ರಿ ಮರಣ ಮತ್ತು ಪರಲೋಕದ ಬಗ್ಗೆ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಉಪನ್ಯಾಸ ನೀಡಲಿದ್ದಾರೆ. ಏ. 3 ರಂದು ಅಲ್ಲಾಹನ ಸ್ಮರಣೆ ಹಾಗೂ ಪ್ರಾರ್ಥನೆಗೆ ಪ್ರವಾದಿ ವಂಶಸ್ಥ ಅಸ್ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಞಳ್ ತಳೀಕೆರೆ ನೇತೃತ್ವ ನೀಡಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆ, ಹೊರರಾಜ್ಯದ ಖ್ಯಾತ ಸೂಫಿ, ಸಂತರು, ಧಾರ್ಮಿಕ, ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ತಾ. 29 ರಂದು ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರು ವಿಶೇಷ ಪ್ರಾರ್ಥನೆ ನೆರವೇರಿಸಲಿದ್ದಾರೆ ಎಂದು ಪಿ.ಎಂ.ಎ. ಅಜೀಜ್ ಮಾಸ್ಟರ್ ತಿಳಿಸಿದರು.

ಗೋಷ್ಠಿಯಲ್ಲಿ ಪಯ್‍ನರಿ ಸುನ್ನಿ ಜಮಾಅತ್‍ನ ಅಧ್ಯಕ್ಷ ಎ.ಎ. ಮುಹಮ್ಮದ್ ಹಾಜಿ, ಸ್ವಲಾತ್ ಸಮಿತಿ ಅಧ್ಯಕ್ಷ ನಾಸಿರ್ ಮಕ್ಕಿ, ಖಜಾಂಚಿ ಕುಂಡಂಡ ಎ. ಮುಹಮ್ಮದ್ ಹಾಜಿ ಹಾಗೂ ಸಲಹಾ ಸಮಿತಿ ಸದಸ್ಯ ಪೊಯಕರೆ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.

ಶ್ರೀ ಚೌಡೇಶ್ವರಿ-ಮುನೇಶ್ವರ ಪೂಜೆ

ಸೋಮವಾರಪೇಟೆ: ಸಮೀಪದ ಕಾನ್ವೆಂಟ್‍ಬಾಣೆ ಗ್ರಾಮದಲ್ಲಿರುವ ಶ್ರೀ ಚೌಡೇಶ್ವರಿ, ಮುನೇಶ್ವರ ಮತ್ತು ನಾಗದೇವರುಗಳ ವಾರ್ಷಿಕ ಪೂಜೋತ್ಸವ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ಚೌಡೇಶ್ವರಿ, ಮುನೇಶ್ವರ ಮತ್ತು ನಾಗದೇವರುಗಳಿಗೆ ಶುದ್ದೀ ಪುಣ್ಯಾಹ, ರಕ್ಷಾಬಂಧನ, ಪ್ರಾರ್ಥನೆ, ನವಕಲಶ ಪೂಜೆ, ಗಣಪತಿ ಹೋಮ, ಕಳಶಾಭಿಷೇಕ, ಶುದ್ಧ ಕಲಶ ಪಂಚಾಮೃತ ಅಭಿಷೇಕ, ಅಲಂಕಾರ ನಂತರ ಮಹಾಪೂಜೆ ಜರುಗಿತು.

ಮಂಗಳವಾರದಂದು ಚೌಡೇಶ್ವರಿ ದೇವಿಗೆ ಅಷ್ಟ ದಿಗ್ಬಂಧನ, ಪುಣ್ಯಾಹ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ನಡೆಯಿತು. ಮೂರು ದಿನಗಳ ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ಭಕ್ತಾದಿಗಳಿಗೆ ಸಾಮೂಹಿಕ ಅನ್ನದಾನ ಏರ್ಪಡಿಸಲಾಗಿತ್ತು. ಚೌಡ್ಲು ಹಾಗೂ ಹಾನಗಲ್ಲು ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಪೂಜೋತ್ಸವ ಪ್ರಯುಕ್ತ ಗ್ರಾಮಸ್ಥರಿಗೆ ಕಬಡ್ಡಿ, ಹಗ್ಗಜಗ್ಗಾಟ, ಥ್ರೋಬಾಲ್, ವಾಲಿಬಾಲ್ ಸೇರಿದಂತೆ ಇತರ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ಮಹಿಳಾ ಆಯೋಗದ ಜಿಲ್ಲಾ ಪ್ರತಿನಿಧಿ ಅಶ್ವಿನಿ ಕೃಷ್ಣಕಾಂತ್, ಐಎನ್‍ಟಿಯುಸಿ ಜಿಲ್ಲಾ ಉಪಾಧ್ಯಕ್ಷ ಹೊಸಬೀಡು ಹೂವಯ್ಯ, ಭೋವಿ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಜಿತ್, ತಾ.ಪಂ. ಸದಸ್ಯೆ ತಂಗಮ್ಮ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ವಜನ, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಉಪಾಧ್ಯಕ್ಷ ಮಿಥುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಲತೀಶ್, ಖಜಾಂಚಿ ಪರಮೇಶ್, ಗೌರವಾಧ್ಯಕ್ಷ ಕೊರಗಪ್ಪ, ಅರ್ಚಕ ಲಿಂಗಪ್ಪ ಸೇರಿದಂತೆ ಪದಾಧಿಕಾರಿಗಳು ಪೂಜೋತ್ಸವದ ಯಶಸ್ಸಿಗೆ ಶ್ರಮಿಸಿದರು.

ಬಸವೇಶ್ವರ ಉತ್ಸವ

ಸಿದ್ದಾಪುರ: ಸಮೀಪದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ಮೂರು ದಿನಗಳ ಕಾಲ ಬಿಳಿಗೇರಿಯ ಉದಯ ಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಿತು.

ಕುಕ್ಕುನೂರು ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು. ಉತ್ಸವದ ಅಂಗವಾಗಿ ಕಾಲ ಗಣಪತಿ ಹೋಮ, ಕಲಶ ಪೂಜೆ, ಕೊಂಡ ಸೇವೆ, ರುದ್ರಪಾರಾಯಣ, ಗಂಗಾಪೂಜೆ, ಮಹಾಪೂಜೆ, ತೀರ್ಥಪ್ರಸಾದ ಅನ್ನಸಂತರ್ಪಣೆ ನಡೆಯಿತು. ಗಂಗಾ ಸ್ನಾನದ ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ

ಮಡಿಕೇರಿ: ನಗರದ ಪ್ರಸಿದ್ಧ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರೆ ಏ. 3 ರಿಂದ 7 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಹಾಗೂ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಖಜಾಂಚಿ ಎನ್.ವಿ. ಉಣ್ಣಿಕೃಷ್ಣನ್ ಮಾತನಾಡಿ, ಏಪ್ರಿಲ್ 3 ರ ಪೂರ್ವಾಹ್ನ 6.30ಕ್ಕೆ ಕೇರಳದ ಅಡೂರಿನ ಶ್ರೀ ಮಾಂಗೂರು ಪಾರ್ಥಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಶಕ್ತಿ ಗಣಪತಿ ದೇವರಿಗೆ 108 ತೆಂಗಿನ ಕಾಯಿಗಳ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದರು. ಅಂದು ಸಂಜೆ 4 ಗಂಟೆಗೆ ಧ್ವಜಾರೋಹಣ, 6 ಗಂಟೆಗೆ ದೀಪಾರಾಧನೆ, 7.30ಕ್ಕೆ ವಾಸ್ತು ಪೂಜೆ, ವಾಸ್ತು ಬಲಿ ಇನ್ನಿತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಏ. 4 ರಂದು ಬೆಳಿಗ್ಗೆ 8 ಗಂಟೆಗೆ ಕಲಶ ಪೂಜೆ, 10 ಗಂಟೆಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, 1 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶ್ರೀ ಭೂತಬಲಿ ಸೇವೆ ಜರುಗಲಿದೆ.

ಏ. 5 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಾಗದೇವರಿಗೆ ಪ್ರಿಯವಾದ ನೂರುಂಪಾಲುಂ (ನಾಗತಂಬಿಲ) ಸಮರ್ಪಣೆ ನಡೆಯಲಿದ್ದು, ಸಂಜೆ 4.30 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವದು, 5.30ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, 7 ಗಂಟೆಗೆ ಮೊದಕಲಶ ಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು.

ಏ. 6 ರಂದು ಸಂಜೆ 5 ಗಂಟೆಗೆ ನಗರದ ಗಾಂಧಿ ಮೈದಾನದಿಂದ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಮರಗೋಡು, ಸಂಪಿಗೆ ಕಟ್ಟೆ, ಐಟಿಐ ಜಂಕ್ಷನ್ ಸೇರಿದಂತೆ ನಗರದ ನಾಲ್ಕು ದಿಕ್ಕುಗಳಿಂದ ಬರುವ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿಯೊಂದಿಗೆ ಕೇರಳದ 50 ಜನರ ಚಿಂಗಾರಿ ಮೇಳ ಚಂಡೆ ವಾದ್ಯ ಹಾಗೂ ಕೇರಳ ಮತ್ತು ಮಂಗಳೂರಿನ ಆಕರ್ಷಕ ಕಲಾತಂಡಗಳು ಮೆರಗು ನೀಡಲಿವೆ ಎಂದರು.

ಸಂಜೆ 4 ಗಂಟೆಯಿಂದ ಮುತ್ತಪ್ಪ ದೇವರ ಮಲೆ ಇಳಿಸುವದು, ಶ್ರೀ ಶಾಸ್ತಪ್ಪ ದೇವರ ವೆಳ್ಳಾಟಂ, ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, 8.30 ಗಂಟೆಗೆ ಶ್ರೀ ಪೊವದಿ ವೆಳ್ಳಾಟಂ, 9.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ 12 ಗಂಟೆಯಿಂದ ಶ್ರೀ ಶಿವಭೂತ ತೆರೆ, ಶ್ರೀ ಗುಳಿಗ ದೇವರ ತೆರೆ, ಶ್ರೀ ಕುಟ್ಟಿಚಾತನ್ ದೇವರ ತೆರೆ, ಬೆಳಗಿನ ಜಾವ 3 ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಮೇಲೇರಿ, 8 ಗಂಟೆಗೆ ಶ್ರೀ ಪೊವ್ವದಿ ತೆರೆ, 9.30 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ನ 11.30ಕ್ಕೆ ಧ್ವಜ ಅವರೋಹಣ ಕಾರ್ಯಕ್ರಮದೊಂದಿಗೆ ಉತ್ಸವ ಮತ್ತು ಜಾತ್ರೆಗೆ ತೆರೆ ಬೀಳಲಿದೆ ಎಂದರು.

ಹರಕೆ ವಿಷ್ಣುಮೂರ್ತಿ ಕೋಲ (ಮೇಲೇರಿ ಇಲ್ಲದ ಅಲಂಕಾರ ವಿಷ್ಣುಮೂರ್ತಿ) ಹಾಗೂ ಮುತ್ತಪ್ಪನ್, ತಿರುವಪ್ಪನ್, ಗುಳಿಗ, ಶಿವಭೂತಂ, ಪೊವ್ವದಿ, ಕುಟ್ಟಿಚಾತನ್ ಸೇರಿದಂತೆ ವಿವಿಧ ಹರಕೆ ಕೋಲಗಳನ್ನು ಮಾಡಿಸುವ ಭಕ್ತಾದಿಗಳು ಏ. 4 ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಉಣ್ಣಿಕೃಷ್ಣನ್ ತಿಳಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ಪ್ರಧಾನ ಕಾರ್ಯದರ್ಶಿ ಶಾರದಾ ರಾಮನ್ ಅವರು ಮಾತನಾಡಿ, ಏ. 6 ರಂದು ರಾತ್ರಿ 8.30 ರಿಂದ ಮೈಸೂರಿನ ಕಲಾವಿದರಿಂದ ವಾದ್ಯಗೋಷ್ಠಿ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ, ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಮುಳಿಯ ಜುವೆಲ್ಲರ್ಸ್ ಅವರಿಂದ ದೇವಾಲಯದ ಬಗೆಗೆ ರಸಪ್ರಶ್ನೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಬೆಳ್ಳಾರಿಕಮ್ಮ ವಾರ್ಷಿಕೋತ್ಸವ

ಸುಂಟಿಕೊಪ್ಪ: ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಹಾಗೂ ಮಹಾಪೂಜೆ, ಎತ್ತು ಪೋರಾಟ್, ಚಾರಿಕುಣಿತ ಶೃದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಬೆಳ್ಳಾರಿಕ್ಕಮ್ಮ ಉತ್ಸವ ದೇವಾಯಲದಲ್ಲಿ ವ್ರತಾಚರಣೆಯ ಅಂಗವಾಗಿ 6 ದಿನಗಳ ಕಾಲ ವಿಶೇಷ ಪೂಜೆಯಲ್ಲಿ ಸುಂಟಿಕೊಪ್ಪ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮದ ಜನತೆಯು ಚಾರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಸಲ್ಲಿಸಿದರು.

ಕೊನೆಯ ದಿನವಾದ ಸೋಮವಾರ ದೇವಸ್ಥಾನದಲ್ಲಿ ಕೊಡವ ಮತ್ತು ಗೌಡ ಮನೆತನದ ಪುರುಷರು ಕೊಡಗಿನ ಸಾಂಪ್ರದಾಯಿಕ ಉಡುಪು ಧರಿಸುವ ಮೂಲಕ ಪಾಲ್ಗೊಂಡಿದ್ದರು. ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ಭಂಡಾರವನ್ನು ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ನಂತರ ಗ್ರಾಮದ ಜನತೆಯಿಂದ ಎತ್ತು ಪೋರಾಟ್, ಚಾರಿಕುಣಿತದಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಅರ್ಪಿಸುವ ಮೂಲಕ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆ ಪಾಲ್ಗೊಂಡಿದ್ದರು.

ಶ್ರೀ ಭಗವತಿ ಉತ್ಸವ

ಮಡಿಕೇರಿ: ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಶ್ರೀ ಭಗವತಿ ದೇವರ ಉತ್ಸವ ತಕ್ಕಮುಖ್ಯಸ್ಥರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತರುವದರೊಂದಿಗೆ ಆರಂಭಗೊಂಡು, ಜಳಕದೊಂದಿಗೆ ಮುಕ್ತಾಯಗೊಂಡಿತು.

ದೊಡ್ಡ ಹಬ್ಬದಂದು ಬೆಳಿಗ್ಗೆ ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆÉಯುವ ಮೂಲಕ ಕಟ್ಟು ಮುರಿಯುವ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಅಯ್ಯಪ್ಪ, ಕುಟ್ಟಿಚಾತದೊಂದಿಗೆ ಅತ್ಯಾಕರ್ಷಕವಾದ ‘ಮುಡಿತೆರೆ’ ಕಾರ್ಯಕ್ರಮ ಭಕ್ತಾದಿಗಳ ಗಮನ ಸೆಳೆಯಿತು.

ಉತ್ಸವದ ಕಡೆಯ ದಿನ ಸಂಜೆ ದೇವರ ಜಳಕ ಕಾರ್ಯಕ್ರಮಗಳ ಬಳಿಕ ನೂರಾರು ಭಕ್ತರ ಸಮ್ಮುಖದಲ್ಲಿ ದೇವರ ನೃತ್ಯ ಬಲಿ, ಮಹಾಪೂಜೆ, ಕಲಶ ಪೂಜೆಯೊಂದಿಗೆ ಉತ್ಸವಕ್ಕೆ ತೆರೆ ಬಿತ್ತು. ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಈರಳೆ ಪೊವ್ವೋದಿ (ಭಗವತಿ) ಉತ್ಸವ

ಚೆಟ್ಟಳ್ಳಿ: ಚೆಟ್ಟಳ್ಳಿಯ ಈರಳೆ ಗ್ರಾಮದ ಪೊವ್ವೋದಿ (ಭಗವತಿ) ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಸಂಪ್ರದಾಯದಂತೆ ಊರವರೆಲ್ಲ ಸೇರಿ ದೇವತಕ್ಕ ಹಾಗೂ ಭಂಡಾರ ತಕ್ಕರಾದ ಪೊರಿಮಂಡ ನಾಣಯ್ಯ ಅವರ ಮನೆಯಿಂದ ದುಡಿಕೊಟ್ಟ್ ಹಾಡಿನೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ದೇವರ ಭಂಡಾರವನ್ನು ಹಾಗೂ ದೇವತಕ್ಕ ಹಾಗೂ ಊರುತಕ್ಕರ ಮನೆಯಿಂದ ಎತ್ತ್ ಪೋರಾಟದೊಂದಿಗೆ ದೇವಾಲಯಕ್ಕೆ ಬರಲಾಯಿತು. ನಂತರ ಮೇದರ ಪರೆಯ ಹೊಡೆತಕ್ಕೆ ಹಾಗೂ ದುಡಿಕೊಟ್ಟ್ ಹಾಡಿಗೆ ಸರಿಯಾಗಿ ಬಿಳಿಯ ಕುಪ್ಯಚ್ಯಾಲೆಯನ್ನು ಧರಿಸಿದ ದೇವತಕ್ಕರು ಊರಿನ ತಕ್ಕರು ಹಾಗೂ ಊರಿನವರು ಸರದಿ ಸಾಲಿನಲ್ಲಿ ದೇವಾಲಯದ ಹಾಗೂ ಬೊಳಕ್ ಮರದ ಸುತ್ತಲು ಬೊಳಕಾಟ್ ಹಾಗೂ ಚೌರಿ ಆಟ್ ನೃತ್ಯ ಮಾಡಿ ದೇವರನ್ನು ಕೊಂಡಾಡುವರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವರಿಗೆ ಭಂಡಾರವನ್ನು ಅರ್ಪಿಸಿ ದೇವರ ಪ್ರಸಾದವನ್ನು ಸ್ವೀಕರಿಸಿದರು.

ವಿಶೇಷ ಹಣ್ಣಿನ ಅಲಂಕಾರ

ಶನ�