ಚೆಟ್ಟಳ್ಳಿ, ಮಾ. 27: ಚೆಟ್ಟಳ್ಳಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅನಾಮದೇಯ ವ್ಯಕ್ತಿಗಳು ರಾತ್ರಿಯಲ್ಲಿ ಕಿಟಕಿ ಬಾಗಿಲನ್ನು ತಟ್ಟುವದು, ಕಲ್ಲನ್ನು ಬಿಸಾಡಿ ಕುಚೇಷ್ಠೆ ಮಾಡುವ ಮೂಲಕ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಗಳಿಗೆ ತಲೆನೋವಾ ಗುತ್ತಿರುವ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ ಹಿನ್ನೆಲೆ ಹಿಂದುಳಿದ ವರ್ಗ ವಸತಿ ನಿಲಯಗಳ ಕೊಡಗು ಜಿಲ್ಲಾ ಮೇಲ್ವಿಚಾರಣಾ ಅಧಿಕಾರಿ ಕೆ.ವಿ. ಸುರೇಶ್ ಸ್ಪಂದಿಸಿದ್ದಾರೆ.

ವಸತಿ ನಿಲಯಗಳ ಸುತ್ತಲು ಎಂಟು ಸಿಸಿ ಕ್ಯಾಮರಾಗಳನ್ನು ಅಳವಡಿಸಿರುವದಲ್ಲದೆ ವಿದ್ಯುತ್ ದೀಪಗಳನ್ನು ಅಳವಡಿಸಲು ಸೂಚಿಸಿದ್ದಾರೆ.

ಸುರೇಶ್ ಅವರು ಚೆಟ್ಟಳ್ಳಿ ವಿದ್ಯಾರ್ಥಿ ನಿಲಯಕ್ಕೆ ಖುದ್ದು ಭೇಟಿ ನೀಡಿ ಸಿಸಿ ಕ್ಯಾಮರಾ ಮೇಲ್ವಿಚಾರಣೆಯ ಬಗ್ಗೆ ಪರಿಶೀಲಿಸಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಪುತ್ತರಿರ ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ ಪ್ರೌಢಶಾಲಾ ಶಿಕ್ಷಕರಾದ ಪಿ.ಎಸ್. ಮಾಚಯ್ಯ, ಸಿ. ಪ್ರಸನ್ನ, ಪುತ್ತರಿರ ಕರುಣ್ ಕಾಳಯ್ಯ, ವಸತಿ ವಲಯದ ಮೇಲ್ವಿಚಾರಕ ಚಂದ್ರ ಹಾಜರಿದ್ದರು.