ಗೋಣಿಕೊಪ್ಪಲು,ಮಾ.27: ಇಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಚುನಾವಣೆ ನಡೆದಿದ್ದು ವೀರಾಜಪೇಟೆ ತಾಲೂಕಿನಲ್ಲಿ ಶೇ.80ಕ್ಕೂ ಅಧಿಕ ಮತದಾನ ವಾಗಿದೆ. ರಾಜ್ಯ ವಕೀಲರ ಪರಿಷತ್ತಿಗೆ ಒಟ್ಟು 99 ಉಮೇದುವಾರರು ಸ್ಪರ್ಧಿಸಿದ್ದು, ಸುಮಾರು 25 ನಿರ್ದೇಶಕರ ಆಯ್ಕೆಗೆ ಇಂದು ಚುನಾವಣೆ ರಾಜ್ಯದ ಎಲ್ಲ ನ್ಯಾಯಾಲಯದ ಆವರಣದಲ್ಲಿಯೂ ನಡೆದಿತ್ತು. ವೀರಾಜಪೇಟೆ ನ್ಯಾಯಾಲಯದ ವಕೀಲರ ಸಂಘದ ಕೊಠಡಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಒಟ್ಟು 91 ವಕೀಲ ಮತದಾರರ ಪೈಕಿ 76 ವಕೀಲರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ.83.51 ಮತದಾನವಾಗಿದೆ. ಪೆÇನ್ನಂಪೇಟೆ ನ್ಯಾಯಾಲಯದ ವಕೀಲರ ಸಂಘದ ಕೊಠಡಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಒಟ್ಟು 45 ಮತದಾರರಲ್ಲಿ 37 ಮಂದಿ ವಕೀಲರು ಮತ ಚಲಾಯಿಸಿದ್ದು ಶೇ.82.22 ಮತದಾನವಾಗಿದೆ.

ಪೆÇನ್ನಂಪೇಟೆ ನ್ಯಾಯಾಲಯ ಆವರಣದಲ್ಲಿ ವಕೀಲ ಎಂ.ಟಿ.ಕಾರ್ಯಪ್ಪ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ, ಸಹಾಯಕ ಚುನಾವಣಾಧಿಕಾರಿಯಾಗಿ ಟಿ.ಎಂ.ಅಣ್ಣಯ್ಯ ಕಾರ್ಯನಿರ್ವಹಿಸಿದರು. ವೀರಾಜಪೇಟೆಯಲ್ಲಿ ಬಿ.ಎನ್.ಸುಬ್ಬಯ್ಯ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಬಿ.ಬಿ.ಮಾದಪ್ಪ ಕಾರ್ಯನಿರ್ವಹಿಸಿದರು.