ಮಡಿಕೇರಿ, ಮಾ. 31: ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿ ಕಳೆದ ವರ್ಷ ಪೊಮ್ಮಕ್ಕಡ ಒಕ್ಕೂಟವನ್ನು ಪ್ರಾರಂಭಿಸಲಾಗಿದ್ದು, ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ರುವ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ನಿನ್ನೆ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ (ಪೊಮ್ಮಕ್ಕಡನಾಳ್) ಕಾರ್ಯಕ್ರಮವನ್ನು ವೈವಿಧ್ಯಮಯ ವಾಗಿ ಆಚರಿಸಿ ದಿನವಿಡೀ ಸಂಭ್ರಮಿಸಿದರು. ನಗರದ ಕೊಡವ ಸಮಾಜದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರಿಗೆ ವಿವಿಧ ಕ್ರೀಡಾ ಸ್ಪರ್ಧೆ, ಅಡುಗೆ ಸ್ಪರ್ಧೆ, ವಿಚಾರ ಮಂಡನೆ, ಸಭಾಕಾರ್ಯಕ್ರಮ, ಸನ್ಮಾನ, ಪ್ರತಿಭಾ ಪುರಸ್ಕಾರ, ಸ್ವಚ್ಛತಾ ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಿನವಿಡೀ ಸಂಭ್ರಮದ ವಾತಾವರಣ ಕಂಡುಬಂದಿತು.

ಕಾರ್ಯಕ್ರಮಕ್ಕೆ ಬೆಳಿಗ್ಗೆ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಹಾಗೂ ಪದಾಧಿಕಾರಿಗಳು ದೇವರನ್ನು ಸ್ತುತಿಸಿ ಅಕ್ಕಿ ಹಾಕುವದರ ಮೂಲಕ ಚಾಲನೆ ನೀಡಿದರು. ವಿವಿಧ ಸ್ಪರ್ಧಾ ಕಾರ್ಯಗಳ ನಂತರ ಹಿರಿಯ ಸಾಧಕಿ ಪಂದ್ಯಂಡ ಸೀತಾ ಬೆಳ್ಳಪ್ಪ ಅವರ ಸಂಸ್ಮರಣೆಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಚಾರ ಮಂಡಿಸಿದ ಅಳಮಂಡ ಖಿಲ್ಲಿ ಬೋಜಮ್ಮ ಅವರು ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳ ಚೌಕಟ್ಟಿನಲ್ಲಿ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಇಂದು ದೇಶವನ್ನು ಆಳುವ ಮಟ್ಟಕ್ಕೆ ಬೆಳೆದಿರುವದು ಶ್ಲಾಘನೀಯ... ಇದರ ನಡುವೆಯೂ ಮಹಿಳೆಯರ ಮೇಲೆ ಕೆಲವೊಂದು ದೌರ್ಜನ್ಯಗಳು ನಡೆಯುತ್ತಿರುವದು ಆತಂಕಕಾರಿಯಾಗಿದ್ದು, ಮಹಿಳಾ ಸಮೂಹಕ್ಕೆ ಅಗತ್ಯ ಗೌರವ ದೊರೆ ಯುತ್ತಿಲ್ಲ ಎಂದು ವಿಷಾದಿಸಿದರು. ಈ ಬಗ್ಗೆ ಮಹಿಳೆಯರು ಒಟ್ಟಾಗಿರಬೇಕೆಂದರು.

ಅತಿಥಿಯಾಗಿದ್ದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಪೊಮ್ಮಕ್ಕಡ ಕೂಟ ಸಾಮಾಜಿಕ ಕಳಕಳಿ ತೋರುತ್ತಿರು ವದು ಶ್ಲಾಘನೀಯ. ವಿವಿಧ ಇಲಾಖೆಗಳ ಮೂಲಕ ಮಹಿಳೆ ಯರಿಗೆ ಸಾಕಷ್ಟು ಯೋಜನೆಗಳು ಇವೆ. ಈ ಕುರಿತು ಮಾಹಿತಿ ಪಡೆಯುವದರೊಂದಿಗೆ ಇತರರಿಗೂ ಸೌಲಭ್ಯದ ಕುರಿತು ಮಾಹಿತಿ ನೀಡಬೇಕೆಂದರು. ಜನಾಂಗದಲ್ಲಿ ಸಾಕಷ್ಟು

(ಮೊದಲ ಪುಟದಿಂದ) ಪ್ರತಿಭಾನ್ವಿತರಿದ್ದರೂ ಸರಕಾರದ ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸನ್ಮಾನ

ಕಾರ್ಯಕ್ರಮದಲ್ಲಿ ಸಾಧಕ ಸಾಹಿತಿ - ಕಲಾವಿದರಾದ ಮೊಣ್ಣಂಡ ಶೋಭಾ ಸುಬ್ಬಯ್ಯ, ಐಮುಡಿಯಂಡ ರಾಣಿಮಾಚಯ್ಯ, ಪತ್ರಕರ್ತ ಕಾಯಪಂಡ ಶಶಿ ಸೋಮಯ್ಯ, ಮಾಸ್ಟರ್ಸ್ ಕ್ರೀಡಾಕೂಟದ ಸಾಧಕಿ ಕೆಚ್ಚೆಟ್ಟೀರ ರೇಷ್ಮಾ ದೇವಯ್ಯ ಅವರನ್ನು ಸನ್ಮಾನಿಸಲಾಯಿತು. ಮತ್ತೋರ್ವ ಮಹಿಳೆ ಚೇಂದಂಡ ಜಾನ್ಸಿ ಅವರನ್ನೂ ಈ ಸಂದರ್ಭ ಒಕ್ಕೂಟ ದಿಂದ ವಿಶೇಷವಾಗಿ ಪುರಸ್ಕರಿಸ ಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರು ವಹಿಸಿ ಮಾತನಾಡಿದರು. ಕಾರ್ಯದರ್ಶಿ ಬೊಳ್ಳಜೀರ ಯಮುನಾ ಅಯ್ಯಪ್ಪ, ಖಜಾಂಚಿ ಉಳ್ಳಿಯಡ ಗಂಗಮ್ಮ ನಂಜಪ್ಪ, ಕೊಡವ ಸಮಾಜದ ಕಾರ್ಯದರ್ಶಿ ಅರೆಯಡ ರಮೇಶ್ ವೇದಿಕೆಯಲ್ಲಿದ್ದರು. ಸದಸ್ಯೆ ಮೊಂತಿ ಗಣೇಶ್ ಅವರು ಸ್ವಚ್ಛತೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು.

ಬೊಪ್ಪಂಡ ಸರಳಾ ಪ್ರಾರ್ಥಿಸಿ, ಚೋಕಿರ ಅನಿತಾ ದೇವಯ್ಯ ಹಾಗೂ ಮಾದೇಟಿರ ಪ್ರಮೀಳಾ ಜೀವನ್ ಕಾರ್ಯಕ್ರಮ ನಿರೂಪಿಸಿದರು. ತಾಪಂಡ ಸರೋಜ ತಮ್ಮಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಬೊಳ್ಳಜೀರ ಯಮುನಾ ವರದಿ ನೀಡಿದರೆ, ಖಜಾಂಚಿ ಉಳ್ಳಿಯಡ ಸಚಿತಾ ಗಂಗಮ್ಮ ಲೆಕ್ಕಪತ್ರ ಮಂಡಿಸಿದರು. ಕೂಪದೀರ ಜೂನಾ ವಿಜಯ್ ವಂದಿಸಿದರು.

ಸಾಂಸ್ಕøತಿಕ ರಂಗು

ಅಪರಾಹ್ನದ ನಂತರ ಕೊಡವ ಹಾಡು, ಒಂಟಿನಟನೆ, ಹಾಸ್ಯ ನಾಟಕ, ಕೋಲಾಟ, ಎಫ್.ಎಂ.ಸಿ. ಶಾಲಾ ವಿದ್ಯಾರ್ಥಿಗಳ ನೃತ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.